Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಗೆ ‘ಪಾಪು’ ಎಂದು ಅಮಿತ್ ಶಾ

ರಾಹುಲ್ ಗಾಂಧಿಗೆ ‘ಪಾಪು’ ಎಂದು ಅಮಿತ್ ಶಾ
ನವದೆಹಲಿ , ಭಾನುವಾರ, 10 ಜೂನ್ 2018 (08:47 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, ‘ಪಾಪು’ ಎಂದಿದ್ದಾರೆ.

ಕೆಲವೇ ಕೆಲವು ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಅದೃಷ್ಟಶಾಲಿ ಮಗು ಎಂದು ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಲೇವಡಿ ಮಾಡಿದ್ದಾರೆ.

ಜೈಪುರದಲ್ಲಿ  ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ‘ಪದೇ ಪದೇ ಕೇಂದ್ರ ಸರ್ಕಾರಕ್ಕೆ ನಿಮ್ಮ ಸರ್ಕಾರ ಅದು ಮಾಡಲಿಲ್ಲ, ಇದು ಮಾಡಲಿಲ್ಲ ಎಂದು ಆರೋಪಿಸುವ ನೀವು ನಿಮ್ಮ ಮೂರು ತಲೆಮಾರಿನವರು ಅದೇನು ಮಾಡಿದ್ದರೆಂದು ಸ್ವಲ್ಪ ಹೇಳಿ ನೋಡೋಣ. ಕೆಲವು ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆಂದು ಪಾಪ ರಾಹುಲ್ ಖುಷಿಪಡುತ್ತಿದ್ದಾರೆ. ಅವರಿಂದ 14 ರಾಜ್ಯಗಳಿಂದ ಅಧಿಕಾರ ಕಸಿದುಕೊಂಡಿದ್ದೇವೆಂದು ಗೊತ್ತೇ ಇಲ್ಲ ಅವರಿಗೆ’ ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಶಾಂತಾರಾಮ್ ನಾಯ್ಕ್ ಹೃದಯಾಘಾತದಿಂದ ನಿಧನ