Publish Date: Sat, 09 Jun 2018 (13:05 IST)
Updated Date: Sat, 09 Jun 2018 (13:06 IST)
ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರಕ್ಕೆ ಬರುವ ಮೊದಲು ಕೂಡಲೇ ಸಾಲ ಮನ್ನಾ ಮಾಡ್ತೀವಿ ಎಂದಿದ್ದವರು ಈಗ ಕಾಂಗ್ರೆಸ್ ಜತೆ ಸಮ್ಮಿಶ್ರ ಸರ್ಕಾರವಾದ್ದರಿಂದ ನಮ್ಮದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಅಂತಿದ್ದಾರೆ. ಸರ್ಕಾರ ರಚಿಸುವಾಗಲೇ ಸಾಲಮನ್ನಾ ಮಾಡಿದರೆ ಮಾತ್ರ ಹೊಂದಾಣಿಕೆ ಎಂದು ಅಪ್ಪ-ಮಕ್ಕಳು ಹೇಳಬಹುದಿತ್ತು ಎಂದು ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಮೂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ನಾಶ ಮಾಡಲು ಕೈ ನಾಯಕರೇ ಸಾಕು. ಅವರೇ ಹೊಡೆದಾಡಿಕೊಂಡು ಸರ್ಕಾರ ಉರುಳಿಸುತ್ತಾರೆ ನೋಡುತ್ತಿರಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.