Select Your Language

Notifications

webdunia
webdunia
webdunia
webdunia

ಜೆಡಿಎಸ್ ನಲ್ಲೂ ಬಂಡಾಯದ ಬಿಸಿ! ಸಿಎಂ ಕೈಗೂ ಸಿಗುತ್ತಿಲ್ಲ ನೂತನ ಸಚಿವರು!

ಜೆಡಿಎಸ್ ನಲ್ಲೂ ಬಂಡಾಯದ ಬಿಸಿ! ಸಿಎಂ ಕೈಗೂ ಸಿಗುತ್ತಿಲ್ಲ ನೂತನ ಸಚಿವರು!
ಬೆಂಗಳೂರು , ಶನಿವಾರ, 9 ಜೂನ್ 2018 (08:54 IST)
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಉಂಟಾಗಿರುವ ಬಿಕ್ಕಟ್ಟು ಜೆಡಿಎಸ್ ಪಕ್ಷಕ್ಕೂ ತಗಲಿದೆ. ಸಚಿವ ಸ್ಥಾನ ಸಿಗದ ಅಸಮಾಧಾನಿತರು ಒಂದೆಡೆಯಾದರೆ ಪ್ರಮುಖ ಖಾತೆಗಾಗಿ ಪಟ್ಟು ಹಿಡಿದು ನೂತನ ಸಚಿವರು ಸಿಎಂ ಕೈಗೂ ಸಿಗದೇ ಓಡಾಡುತ್ತಿದ್ದಾರೆ.

ಇಂಧನ, ಹಣಕಾಸು, ಕಂದಾಯ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಜೆಡಿಎಸ್ ಈ ಪ್ರಮುಖ ಖಾತೆಗಳನ್ನು ದೇವೇಗೌಡರ ಕುಟುಂಬದವರಿಗೇ ನೀಡಿದ್ದಾರೆ ಎನ್ನುವುದು ನೂತನವಾಗಿ ಸಚಿವರಾಗಿ ಬಡ್ತಿ ಹೊಂದಿದ ಸಿಎಸ್ ಪುಟ್ಟರಾಜು, ಜಿಟಿ ದೇವೇಗೌಡ ಮುಂತಾದವರ ಆರೋಪ.

ಈ ಹಿನ್ನಲೆಯಲ್ಲಿ ಸ್ವತಃ ಸಿಎಂ ಕುಮಾರಸ್ವಾಮಿ ಕರೆ ಮಾಡಿದರೂ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ಇಬ್ಬರೂ ಶಾಸಕರು ಮೈಸೂರಿಗೆ ತೆರಳಿದ್ದಾರೆ ಎಂದು ಖಾಸಗಿ ವಾಹಿನಿಗಳು ವರದಿ ಮಾಡಿವೆ. ಇಂಧನ ಮತ್ತು ಹಣಕಾಸು ಖಾತೆ ಸಿಎಂ ಕುಮಾರಸ್ವಾಮಿಯೇ ಉಳಿಸಿಕೊಂಡಿದ್ದಾರೆ. ಇನ್ನು, ಲೋಕೋಪಯೋಗಿ ಖಾತೆಯನ್ನು ಎಚ್ ಡಿ ರೇವಣ್ಣ ಪಡೆದಿದ್ದಾರೆ. ಕೇವಲ ಶಿಕ್ಷಣ ಇತ್ಯಾದಿ ಅಷ್ಟೇನೂ ಪ್ರಮುಖವಲ್ಲದ ಖಾತೆಗಳನ್ನು ತಮಗೆ ನೀಡಿದ್ದಾರೆ ಎಂದು ಈ ಸಚಿವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಖಾತೆ ಜಗಳಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು ಕಾರಣವೇ?!