Select Your Language

Notifications

webdunia
webdunia
webdunia
webdunia

ಸಂಪುಟ ರಚನೆ ವಿಚಾರದಲ್ಲಿ ಭಿನ್ನಮತ ಇರೋದು ನಿಜ: ಸಿದ್ದರಾಮಯ್ಯ

ಸಂಪುಟ ರಚನೆ ವಿಚಾರದಲ್ಲಿ ಭಿನ್ನಮತ ಇರೋದು ನಿಜ: ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 8 ಜೂನ್ 2018 (15:55 IST)
ಬಾಗಲಕೋಟೆ: ಸಂಪುಟ ಪುನರ್ ರಚನೆ ವಿಚಾರದಲ್ಲಿ  ನಮ್ಮಲ್ಲಿ ಭಿನ್ನಮತ ಇರೋದು ನಿಜ. ಆದ್ರೆ ಅದನ್ನು ಸರಿಪಡಿಸಿಕೊಂಡು ಹೋಗ್ತೀವಿ, ನಮ್ಮನ್ನ ಸೆಳೆಯೋದ್ರಲ್ಲಿ  ಬಿಜೆಪಿಯವರು ಸಕ್ಸಸ್ ಆಗೋದಿಲ್ಲ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಕೃತಜ್ಞತೆ ಹೇಳುವ ಸಲುವಾಗಿ ಎರಡನೇ ದಿನದ ಪ್ರವಾಸ ಕೈಗೊಂಡಿದ್ದು, ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆಯೂ ಬಿಜೆಪಿಯವರು ನಮ್ಮವರನ್ನ ಸೆಳೆಯುವ ಯತ್ನ ಮಾಡಿದ್ದರು, ಅದು ಆಗಲಿಲ್ಲ ಈಗ ನಮ್ಮಲ್ಲಿ ಭಿನ್ನಮತ ಇರೋದು ನಿಜ. ಇದರಲ್ಲಿ ಬಿಜೆಪಿ ಮಂದಿ ಯಶಸ್ಸು ಕಾಣೋದಿಲ್ಲ. ನಮ್ಮಲ್ಲಿರೋ ಭಿನ್ನಮತ ಸರಿಪಡಿಸಿಕೊಳ್ತೀವಿ ಎಂದು ಹೇಳಿದರು. 
 
ಇನ್ನು ಮಾಜಿ ಸಚಿವ ಎಚ್.ಎಮ್.ರೇವಣ್ಣವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಇದಕ್ಕೆ ನನ್ನದು ನೋ ಕಾಮೆಂಟ್ ಎಂದು ಹೇಳಿದ್ರು. ಇತ್ತ ಎರಡನೇ ದಿನದ ಪ್ರವಾಸದಲ್ಲಿ ಆಡಗಲ್, ಕುಟಕನಕೇರಿ, ಹಿರೇ ಮುಚ್ಚಳಗುಡ್ಡ ಸೇರಿದಂತೆ ಅನೇಕ ಗ್ರಾಮ ಗಳಿಗೆ ಭೇಟಿ ನೀಡಿದ್ರು. ಈ ವೇಳೆ ಜನ್ರು ಡೊಳ್ಳು ಬಾರಿಸಿ ಸ್ವಾಗತಿಸಿದರೆ, ಇತ್ತ  ಸಿದ್ದರಾಮಯ್ಯನವರ ಮೆರವಣಿಗೆಯಲ್ಲಿ ಟಗರನ್ನು ಎತ್ತಿ ಹಿಡಿದು ಸಂಭ್ರಮಿಸಿರುವ ದೃಶ್ಯಗಳು ಕಂಡು ಬಂದವು. 

Share this Story:

Follow Webdunia kannada

ಮುಂದಿನ ಸುದ್ದಿ

ಸತೀಶ್ ಜಾರಕಿಹೊಳಿ ಬೆಂಬಲಿಗರ ಸಾಮೂಹಿಕ ರಾಜೀನಾಮೆ