Select Your Language

Notifications

webdunia
webdunia
webdunia
webdunia

ಫಿಜ್ಜಾ ಆರ್ಡರ್ ಮಾಡಲು ಹೋಗಿ 65 ಸಾವಿರ ಕಳಕೊಂಡ ಉದ್ಯಮಿ!

ಫಿಜ್ಜಾ ಆರ್ಡರ್ ಮಾಡಲು ಹೋಗಿ 65 ಸಾವಿರ ಕಳಕೊಂಡ ಉದ್ಯಮಿ!
ಮುಂಬೈ , ಶನಿವಾರ, 17 ಜುಲೈ 2021 (08:01 IST)
ಮುಂಬೈ(ಜು. 16) ಸೈಬರ್ ಅಪರಾಧಗಳು ಹೊಸ ಹೊಸ ಹೊಸ ರೀತಿಯಲ್ಲಿ ಕಂಡುಬರುತ್ತಲೆ ಇವೆ. ಫಿಜ್ಜಾ ಆರ್ಡರ್ ಮಾಡಲು ಹೋಗಿ ಮುಂಬೈ ಮೂಲದ ಉದ್ಯಮಿಯೊಬ್ಬರನ್ನು 65,000 ರೂ. ಕಳೆದುಕೊಂಡಿದ್ದಾರೆ.  59 ವರ್ಷದ ವ್ಯಕ್ತಿ  ವಂಚನೆಗೆ ಒಳಗಾಗಿದ್ದಾರೆ.

* ಹೊಸ ಹೊಸ ರೀತಿಯ ಸೈಬರ್ ಅಪರಾಧ
* ಫಿಜ್ಜಾ ಕಂಪನಿ ಹೆಸರಿನಲ್ಲಿ ಮಹಾಮೋಸ
* ಫಿಜ್ಜಾ ಆರ್ಡರ್ ಮಾಡಲು ಹೋಗಿ 65,000   ರೂ. ಕಳೆದುಕೊಂಡ ಉದ್ಯಮಿ
* ಆನ್ ಲೈನ್ ನಲ್ಲಿ ಸರ್ಚ್ ಮಾಡಿ ಬುಕ್ ಮಾಡುವ ಮುನ್ನ ಎಚ್ಚರ

ಫಿಜ್ಜಾ ಶಾಪ್ ಮ್ಯಾನೇಜರ್ ರೀತಿ ಪೋಸ್ ಕೊಟ್ಟ ವ್ಯಕ್ತಿ ಹಣ ಲಪಟಾಯಿಸಿದ್ದಾನೆ. ಆದರೆ ಇದಾದ ತಕ್ಷಣ ಕ್ರೆಡಿಟ್ ಕಾರ್ಡ್ ಕಂಪನಿ ಎಚ್ಚೆತ್ತುಕೊಂಡು ಮೋಸ ಹೋದ ಉದ್ಯಮಿಗೆ ತಿಳಿಸಿದ್ದು ವಿವರ ನೀಡಿದೆ. ಪೊಲೀಸ್ ಠಾಣೆಯಲ್ಲಿ ತಕ್ಷಣ ದೂರು ದಾಖಲಿಸಲಾಗಿದೆ.
ಘಟನೆ ಹೇಗಾಯಿತು?
ಫಿಜ್ಜಾ ಇಷ್ಟಪಟ್ಟ ವ್ಯಕ್ತಿ ಆನ್ ಲೈನ್ ನಲ್ಲಿ ಸರ್ಚ್ ಮಾಡಿದ್ದಾರೆ.  ಫ್ರಾನ್ಸಿಸ್ಕೊ ಪಿಜ್ಜಾ  ಎಂಬದು ಸಿಕ್ಕಿದ್ದು ಅಲ್ಲಿನ ಆಫರ್ ಗಳನ್ನು ನೋಡಿ ಆರ್ಡರ್ ಮಾಡಲು ಮುಂದಾಗಿದ್ದಾರೆ.
ಅಲ್ಲಿ ಸಿಕ್ಕಿದ ನಂಬರ್ ಗೆ ಕರೆ ಮಾಡಿದಾಗ ವಂಚಕ ಆ ಕಡೆಯಿಂದ ನಿಮಗೆ ಕಂಪನಿಯಿಂದ ಕರೆ ಬರುತ್ತದೆ ಎಂದು ತಿಳಿಸಿದ್ದಾರೆ. ಇದಾದ ಕೆಲವೆ ಹೊತ್ತಿನಲ್ಲಿ ಕರೆ ಬಂದಿದ್ದು ಉದ್ಯಮಿ ಫಿಜ್ಜಾ ಆರ್ಡರ್ ಗೋಸ್ಕರ ಎಲ್ಲ ವಿವರ ನೀಡಿದ್ದಾರೆ. ಆಡ್ವಾನ್ಸ್ ಪೇಮೆಂಟ್ ಮಾಡಬೇಕು  ಎಂದು  ಹೇಳಿದ್ದು ಲಿಂಕ್ ಒಂದನ್ನು ಕಳಿಸಿದ್ದಾರೆ.
ಇದನ್ನು ನಂಬಿದ ಉದ್ಯಮಿ ಲಿಂಕ್ ಓಪನ್ ಮಾಡಿದ್ದಾರೆ. ಅಲ್ಲಿ ಹಲವು ಡಿಟೇಲ್ಸ್ ತುಂಬಲು ಕೇಳಿದ್ದು ಒಂದಾದ ಮೇಲೆ ಒಂದು ತುಂಬಿಕೊಂಡು ಬಂದಿದ್ದಾರೆ. ಒಟಿಯಿಯನ್ನು ಸಹ ಎಂಟರ್ ಮಾಡಿದ್ದಾರೆ.
ಒಟಿಪಿ ಹಾಕಿದ ತಕ್ಷಣ ಖಾತೆಯಿಂದ ಇಪ್ಪತ್ತು ಸಾವಿರ ಕಟ್ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ  ಇದು ಮಿಸ್ಟೇಕ್ ನಿಂದ ಆಗಿದ್ದು ನಿಮ್ಮ ಖಾತೆಗೆ ರಿಟರ್ನ್ ಆಗುತ್ತಿದೆ. ಈಗ ಮತ್ತೊಮ್ಮೆ ಪ್ರಯತ್ನಿಸಿ ಎಂದು  ಕೇಳಿದ್ದು ಎರಡನೇ ಸಾರಿ ಟ್ರಾನ್ಸಾಕ್ಷನ್ ಮಾಡಿದ್ದಾರೆ.  ಈಗ ಸಹ ಮತ್ತೆ ಇಪ್ಪತು ಸಾವಿರ ರೂ. ಕಟ್ ಆಗಿದೆ. ಈ ರೀತಿ ಮಾಡುತ್ತಲೇ  65,000  ಸಾವಿರ ರೂ. ವಂಚನೆ ಮಾಡಲಾಗಿದೆ.
ಅನುಮಾನಾಸ್ಪದ ಟ್ರಾನ್ಸಾಕ್ಷನ್ ಗುರುತಿಸಿದ ಕ್ರೆಡಿಟ್ ಕಾರ್ಡ್ ಕಂಪನಿ ತಕ್ಷಣ ವ್ಯಕ್ತಿಗೆ ಕರೆ ಮಾಡಿ ಮೋಸ ಹೋಗಿರುವ ವಿಚಾರ ತಿಳಿಸಿದ್ದು ತಕ್ಷಣ ಹತ್ತಿರದಸೈಬರ್ ಠಾಣಗೆ ದೂರು ನೀಡಲು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜು ಪುನಾರಂಭ; ಸಿಎಂ ಜತೆ ಚರ್ಚಿಸಿ ಇನ್ನೆರಡು ದಿನದಲ್ಲಿ ನಿರ್ಧಾರ-ಡಿಸಿಎಂ