Select Your Language

Notifications

webdunia
webdunia
webdunia
webdunia

2023ರೊಳಗೆ ಭಕ್ತರಿಗೆ ಸಿಗಲಿದೆ ಅಯೋಧ್ಯೆ ರಾಮಲಲ್ಲಾನ ದರ್ಶನ!

2023ರೊಳಗೆ ಭಕ್ತರಿಗೆ ಸಿಗಲಿದೆ ಅಯೋಧ್ಯೆ ರಾಮಲಲ್ಲಾನ ದರ್ಶನ!
ನವದೆಹಲಿ , ಶುಕ್ರವಾರ, 16 ಜುಲೈ 2021 (15:23 IST)
ಅಯೋಧ್ಯೆ(ಜು.16): ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿ 2023 ರ ಅಂತ್ಯದೊಳಗೆ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ. ಬರೋಬ್ಬರಿ 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಂದಿರ ಕಾಮಗಾರಿ 2025ರ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಯೋಜನೆಯ ಮೇಲ್ವಿಚಾರಣೆ ವಹಿಸಿರುವ ಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದ್ದಾರೆ.

* ರಾಮಲಲ್ಲಾನ ನೋಡಲು ಕಾಯುತ್ತಿರುವ ಭಕ್ತರಿಗೆ ಗುಡ್ ನ್ಯೂಸ್
* 2023ರೊಳಗೆ ಭಕ್ತರಿಗೆ ಸಿಗಲಿದೆ ರಾಮನ ದರ್ಶನ
* 2025ರ ಅಂತ್ಯದೊಳಗೆ ಮಂದಿರ ಹಾಘೂ ಆಸುಪಾಸಿನ ಎಲ್ಲಾ ಕಾಮಗಾರಿ ಪೂರ್ಣ

ಈ ಬಗ್ಗೆ ಮಾತನಾಡಿದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, "2023 ರ ಅಂತ್ಯದೊಳಗೆ, ರಾಮ್ಲಲ್ಲಾನ ದರ್ಶನ ಪಡೆಯಲು ಭಕ್ತರಿಗೆ ರಾಮ ಮಂದಿರದ ಗರ್ಭಗುಡಿ ತೆರೆಯಲಾಗುವುದು" ಎಂದು ಹೇಳಿದ್ದಾರೆ.
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ 15 ಸದಸ್ಯರು ಹಾಗೂ ಮಂದಿರ ನಿರ್ಮಿಸುತ್ತಿರುವ ಎಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳೊಂದಿಗೆ ಎರಡು ದಿನಗಳ ಸಭೆಯ ನಂತರ ಇಂತಹುದ್ದೊಂದು ನಿರ್ಧಾರ ಪ್ರಕಟಿಸಲಾಗಿದೆ. ಟ್ರಸ್ಟ್ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಳೆದ ವರ್ಷ, 2020ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನೆರವೇರಿಸಿದ್ದರು. ಕೊರೋನಾ ಹಾವಳಿ ನಡುವೆಯೂ ಮಂದಿರದ ಕಾರ್ಯ ಮುಂದುವರೆದಿದ್ದು, ಪ್ರಸ್ತುತ ಎಂಜಿನಿಯರ್ಗಳು ದೇವಾಲಯದ ಅಡಿಪಾಯದ ಕೆಲಸ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 15 ರೊಳಗೆ ಇದು ಪೂರ್ಣಗೊಳ್ಳುವ ಸಾಧ್ಯತೆಯಿದೆ.
ನವೆಂಬರ್ನಲ್ಲಿ ದೀಪಾವಳಿ ಹಬ್ಬದ ಬಳಿಕ ಎರಡನೇ ಹಂತದ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ ಸಾವು: ಸಂಬಂಧಿಕರಿಂದ ದಾಂಧಲೆ!