Select Your Language

Notifications

webdunia
webdunia
webdunia
webdunia

ಭೀಕರವಾದ ಮತ್ತೊಂದು ಸಾಂಕ್ರಾಮಿಕಕ್ಕೆ ತುತ್ತಾಗಲಿದೆ: ವಾರೆನ್ ಬಫೆಟ್ ಎಚ್ಚರಿಕೆ

ಭೀಕರವಾದ ಮತ್ತೊಂದು ಸಾಂಕ್ರಾಮಿಕಕ್ಕೆ ತುತ್ತಾಗಲಿದೆ: ವಾರೆನ್ ಬಫೆಟ್ ಎಚ್ಚರಿಕೆ
ಅಮೆರಿಕ , ಸೋಮವಾರ, 5 ಜುಲೈ 2021 (14:58 IST)
ಅಮೆರಿಕ : ವಿಶ್ವಪ್ರಸಿದ್ಧ ಉದ್ಯಮಿ, ಹೂಡಿಕೆದಾರ ಪ್ರಸ್ತುತ ಬರ್ಕ್ಶೈರ್ ಹ್ಯಾಥ್ವೇ ಅಧ್ಯಕ್ಷ ಮತ್ತು ಸಿಇಒ ಆಗಿರುವ ವಾರೆನ್ ಎಡ್ವರ್ಡ್ ಬಫೆಟ್ ಅವರು ಜಗತ್ತು ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. 

ಸಿಎನ್ಬಿಸಿಗೆ ನೀಡಿರುವ ಸಂದರ್ಶನದಲ್ಲಿ ಜಗತ್ತಿನ ಮುಂದಿನ ಪರಿಸ್ತಿತಿ ಕೋವಿಡ್-19 ಗಿಂತ ಭೀಕರವಾಗಿರಲಿದೆ ಎಂದು ಹೇಳಿರುವ ಇವರು ನಾವು ಇನ್ನೂ ಮುಂದಿನ ಪರಿಸ್ಥಿತಿ ಎದುರಿಸಲು ಸಾಮೂಹಿಕವಾಗಿ ಸಿದ್ಧರಾಗಿಲ್ಲ ಎಂದೂ ಹೇಳಿದ್ದಾರೆ. ಸಂದರ್ಶನದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ನಮ್ಮ ಜಗತ್ತನ್ನು ಬಾಧಿಸಲಿದೆ. ಪರಮಾಣು, ರಾಸಾಯನಿಕ, ಜೈವಿಕ, ಸೈಬರ್ ಭೀಕರತೆ ನಮಗೆ ತಿಳಿದಿದೆ. ಇವುಗಳಲ್ಲಿ ಪ್ರತಿಯೊಂದರ ಭೀಕರತೆ ಸಾಧ್ಯತೆಯ ಬಗ್ಗೆ ಅರಿವಿದೆ. ಆದರೆ ಇದನ್ನು ಎದುರಿಸಲು ಸಮಾಜ ಸಿದ್ಧವಾಗಿದೆ ಎಂದು ನಮಗೆ ಅನಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೋವಿಡ್-19 ಜಗತ್ತಿನಾದ್ಯಂತ ಹಬ್ಬುತ್ತಿದ್ದಂತೆ ಇದನ್ನು ತಡೆಗಟ್ಟಲು ತೆಗೆದುಕೊಂಡ ಮಾರ್ಗವೆಂದರೆ ಲಾಕ್ಡೌನ್. ಆದರೆ ಇದನ್ನೆಲ್ಲಾ ಗಮನಿಸಿದರೆ ಜಗತ್ತು ಇನ್ನು ಮುಂದಿನ ದೊಡ್ಡ ಪ್ರಮಾಣದ ತೊಂದರೆಗಳನ್ನು ಎದುರಿಸಲು ಸಮರ್ಪಕವಾಗಿ ಸಿದ್ಧವಾಗಿಲ್ಲ ಎಂದೆನಿಸುತ್ತಿದೆ. ಉದ್ಯಮಿಗಳ ಪ್ರಕಾರ, ಮುಂದಿನ ಅನಾಹುತ ದೊಡ್ಡ ಹಾಗೂ ಸಣ್ಣ ಪ್ರಮಾಣದಲ್ಲಿ ಘಟಿಸಬಹುದು. ಆದರೆ ದೊಡ್ಡ ಪ್ರಮಾಣದ ಸನ್ನಿವೇಶಗಳಿಗೆ ಸಮಾಜ ತಯಾರಿ ನಡೆಸುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಸಾಂಕ್ರಾಮಿಕ ರೋಗದ ನಿಕೃಷ್ಟ ಪರಿಣಾಮ ಹಾಗೂ ಈಗಾಗಲೇ ಲಾಕ್ ಡೌನ್ನಿಂದ ಸಣ್ಣ ಉದ್ಯಮಗಳ ಮೇಲೆ ಬಿದ್ದಿರುವ ಹೊಡೆತದ ಬಗ್ಗೆ ಮಾತನಾಡಿದರು. ಸಣ್ಣ ಉದ್ಯಮಿಗಳಿಗೆ ಹೋಲಿಸಿದರೆ ದೊಡ್ಡ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಇದು ದೊಡ್ಡ ಉದ್ಯಮದ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮವೂ ಬೀರಿಲ್ಲ ಎಂದು ಅರಿವಾಯಿತು.ಅಲ್ಲದೇ ಸಣ್ಣ ಉದ್ಯಮದ ಮೇಲೆ ಪರಿಣಾಮ ಬೀರಿರುವುದು ಆರ್ಥಿಕ ಪರಿಣಾಮದ ಅಸಮತೋಲನ ಸಂಗತಿಯಾಗಿದೆ. ಅಂದರೆ ನೂರಾರು ಅಥವಾ ಸಾವಿರಾರು ಅಥವಾ ಲಕ್ಷಾಂತರ ಸಣ್ಣ ಉದ್ಯಮಗಳ ಮೇಲೆ ಭಯಾನಕ ಪರಿಣಾಮ ಬೀರಿದೆ. ಆದರೆ ಹೆಚ್ಚಿದ ಬಹುದೊಡ್ಡ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಆಟೋಮೋಟಿವ್ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ನಿರೀಕ್ಷಿಸದ ಯಶಸ್ಸು ಎಂದು ಹೇಳಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಕೆಲವು ನಿರ್ದಿಷ್ಟ ಉದ್ಯಮಗಳು ಹೆಚ್ಚಿನ ಲಾಭವನ್ನು ಗಳಿಸಿದೆ. ಇದು ದಾಖಲೆಯನ್ನು ಸರಿಗಟ್ಟಿದೆ ಎಂದು ನೆನಪಿಸಿಕೊಂಡರು.

ಇನ್ನು ಸಿಎನ್ಬಿಸಿಯ ವರದಿ ಪ್ರಕಾರ, ಕಾರ್ಖಾನೆಗಳ ಸ್ಥಗಿತ ಮತ್ತು ಜಾಗತಿಕವಾಗಿ ಸಂಭವಿಸಿದ ಅರೆವಾಹಕಗಳ ಕೊರತೆಯಿಂದಾಗಿ ವಾಹನ ತಯಾರಕರು ಹಾಗೂ ವಿತರಕರ ವ್ಯವಹಾರದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ಬೇಡಿಕೆಯ ವಿಷಯದಲ್ಲಿ ವಿಮಾನಯಾನ ಸಂಸ್ಥೆಗಳಾದ ಬಿಎನ್ಎಸ್ಎಫ್ ರೈಲ್ವೆ ಮತ್ತು ನೆಟ್ಜೆಟ್ಗಳಿಗೆ ಏನಾಗಲಿದೆ ಎಂದು ಯಾರು ತಿಳಿದಿಲ್ಲ. ಆದ್ದರಿಂದ ಅವರು ತಮ್ಮದೇ ಆದ ಆರ್ಥಿಕ ಅನಿಶ್ಚಿತತೆ ಎದುರಿಸಿದ್ದಾರೆ ಎಂದು ವಿಶ್ವಪ್ರಸಿದ್ಧ ಹೂಡಿಕೆದಾರರು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಅನಿಶ್ಚಿತತೆ ಮತ್ತು ಅವ್ಯವಸ್ಥೆಯ ಹೊರತಾಗಿಯೂ, ಬಫೆಟ್ ಗಮನವನ್ನು ಉದ್ಯಮಕ್ಕೆ ವರ್ಗಾಯಿಸಲು ಮತ್ತು ಇತರ ಕಂಪನಿಗಳಿಗೆ ಸಹಾಯಕ್ಕಾಗಿ ಸರ್ಕಾರವನ್ನು ಅವಲಂಬಿಸಬೇಕಾಗಿಲ್ಲದ ಕಾರಣ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ಇದೀಗ ಮತ್ತೊಂದು ರೂಪಾಂತರಿ ವೈರಸ್ ಆದ ಡೆಲ್ಟಾ ವೈರಸ್ ಜಗತ್ತಿನಾದ್ಯಂತ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದ್ದು, ಸುಮಾರು 100 ದೇಶಗಳಲ್ಲಿ ಕಾಣಿಸಿಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಬಣ್ಣ ಬಯಲು ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ