Select Your Language

Notifications

webdunia
webdunia
webdunia
Friday, 11 April 2025
webdunia

ಸುಮಲತಾ ಬಣ್ಣ ಬಯಲು ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ

bengaluru
bengaluru , ಸೋಮವಾರ, 5 ಜುಲೈ 2021 (14:10 IST)
ಏಜೆಂಟರನ್ನು ಇಟ್ಟುಕೊಂಡು ಸಂಸದೆ ಡೀಲ್ ಮಾಡುತ್ತಿರುವುದು ನಮಗೆ ಗೊತ್ತಿದೆ. ನನ್ನ ಬಳಿ ಸುಮಲತಾ ಅವರು ಮಾತನಾಡಿರುವ ಹಲವು ವೀಡಿಯೋಗಳಿವೆ. ಮುಂಬರುವ ಚುನಾವಣೆ ವೇಳೆ ಇದನ್ನು ಬಹಿರಂಗಪಡಿಸಿ ಅವರ ಬಣ್ಣ ಬಯಲು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಂಡ್ಯ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಎಂದು ಹೇಳುವ ಮೂಲಕ ಸುಮಲತಾ ಜನರನ್ನು ಜಯಗೊಳಿಸುತ್ತಿದ್ದಾರೆ. ಸುಮಲತಾ ಏನು ಇಂಜಿನಿಯರ್ರಾ? ಅವರನ್ನು ಕೆಎರ್ ಎಸ್ ಡ್ಯಾಂ ಬಳಿ ಅಡ್ಡಡ್ಡ ಮಲಗಿಸಬೇಕು ಎಂದರು.
ಸುಮಲತಾ ಅವರ ಈ ದುರಂಹಕಾರ ಹೆಚ್ಚು ದಿನ ನಡೆಯೋಲ್ಲ. ಮಹಿಳೆ ಎಂದು ಸುಮ್ಮನಿರೋಕೆ ಆಗಲ್ಲ. ತಪ್ಪು ಯಾರೇ ಮಾಡಿದ್ದರೂ ತಪ್ಪೇ. ಸುಮಲತಾ ಜನರನ್ನು ಭಯ ಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ, ಅತ್ತೆಯ ವರದಕ್ಷಿಣೆ ಕಾಟಕ್ಕೆ ಗೃಹಿಣಿ ಆತ್ಮಹತ್ಯೆ