Select Your Language

Notifications

webdunia
webdunia
webdunia
webdunia

21,257 ಹೊಸ ಪ್ರಕರಣ, ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ

21,257 ಹೊಸ ಪ್ರಕರಣ, ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ
ನವದೆಹಲಿ , ಶುಕ್ರವಾರ, 8 ಅಕ್ಟೋಬರ್ 2021 (12:01 IST)
ನವದೆಹಲಿ : ಕಳೆದ 24 ಗಂಟೆಗಳಲ್ಲಿ 21,257 ಜನರಿಗೆ ಕೋವಿಡ್-19 ದೃಢಪಟ್ಟಿದ್ದು, ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 3,39,15,569 ಕ್ಕೆ ಏರಿಕೆಯಾಗಿದೆ.

ಕಳೆದ 14 ದಿನಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 30,000 ಕ್ಕಿಂತ ಕಡಿಮೆಯಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,40,221 ಕ್ಕೆ ಇಳಿದಿದ್ದು, ಕಳೆದ 205 ದಿನಗಳಲ್ಲಿ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಬೆಳಿಗ್ಗೆ 8ವರೆಗಿನ ಲಭ್ಯವಾದ ಮಾಹಿತಿಯ ಪ್ರಕಾರ, 271 ಜನರು ಸಾವಿಗೀಡಾಗಿದ್ದು, ಮೃತರ ಒಟ್ಟು ಸಂಖ್ಯೆ 4,50,127 ಕ್ಕೆ ಏರಿದೆ. 24 ಗಂಟೆಗಳ ಅವಧಿಯಲ್ಲಿ 3,977 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಒಟ್ಟು ಸೋಂಕು ಪ್ರಕರಣಗಳಲ್ಲಿ ಶೇ 0.71 ರಷ್ಟು ಸಕ್ರಿಯ ಪ್ರಕರಣಗಳಿವೆ. ಇದು 2020ರ ಮಾರ್ಚ್ ನಂತರ ಅತ್ಯಂತ ಕಡಿಮೆಯಾಗಿದೆ. ರಾಷ್ಟ್ರೀಯ ಕೋವಿಡ್ -19 ಚೇತರಿಕೆ ದರವು ಶೇಕಡ 97.96ರಷ್ಟಿದ್ದು, 2020ರ ಮಾರ್ಚ್ ನಂತರ ಅತಿ ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ.
ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ 1.53ರಷ್ಟಿದ್ದರೆ, ಕಳೆದ 39 ದಿನಗಳಿಂದ ಇದು ಶೇಕಡಾ ಮೂರಕ್ಕಿಂತ ಕಡಿಮೆ ಇದೆ. ಗುರುವಾರ ಒಂದೇ ದಿನ 13,85,706 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೋವಿಡ್-19 ಪತ್ತೆಗಾಗಿ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 58,00,43,190ಕ್ಕೆ ಏರಿಕೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತವು ವಿಶ್ವಕ್ಕೇ ಮಾದರಿ: ಮೋದಿ