Publish Date: Sat, 02 Oct 2021 (22:09 IST)
Updated Date: Sat, 02 Oct 2021 (22:11 IST)
ಬೆಂಗಳೂರು: ಬಿಎಂಟಿಸಿ ನೌಕರ ಪ್ರಸನ್ನಕುಮಾರ್ ಎಂಬುವರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, ಇದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪತ್ನಿ ವಸಂತಾ ಹಾಗೂ ಮಕ್ಕಳಿಬ್ಬರು ಶುಕ್ರವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕೃತಿ ಬಡಾವಣೆಯಲ್ಲಿ ವಾಸವಿದ್ದ ವಸಂತಾ, ಅವರ ಮಕ್ಕಳಾದ ನಿಶ್ಚಿತಾ (6) ಹಾಗೂ ಯಶವಂತ್ (15) ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.