Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮಹಾನಗರದಲ್ಲಿ ಉನ್ನತ ದರ್ಜೆಯ ಗಾಂಜಾ ಮಾರಾಟ ಜಾಲ

webdunia
ಶನಿವಾರ, 2 ಅಕ್ಟೋಬರ್ 2021 (21:40 IST)
ಬೆಂಗಳೂರು: ಮಹಾನಗರದಲ್ಲಿ ಉನ್ನತ ದರ್ಜೆಯ ಗಾಂಜಾ ಮಾರಾಟ ಜಾಲ ಬೆಳಕಿಗೆ ಬಂದಿದ್ದು ಓರ್ವ ಕಿಂಗ್​ಪಿನ್ ಸೇರಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ವಲಯ ಎನ್ ಸಿಬಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಗಾಂಜಾ ಪೂರೈಕೆ ಮಾಡಲು ಸಿದ್ಧವಾಗಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸೇರಿದಂತೆ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ವಶಪಡಿಸಿಕೊಳ್ಳಲಾಗಿದೆ.
ಕಾರಿನಲ್ಲಿ 8 ಬಾಕ್ಸ್ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈ ವೇಳೆ 137 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಬಂಧಿತರ ಮನೆ ಪರಿಶೀಲನೆ ನಡೆಸಿದಾಗ ಅಲ್ಲಿಯೂ 4.81 ಲಕ್ಷ ಹಣ ಹಾಗೂ 3 ಕೆಜಿ ಗಾಂಜಾ ಪತ್ತೆಯಾಗಿದೆ. ಆರೋಪಿಗಳು ಸ್ವಿಗ್ಗಿ ಡೆಲಿವರಿ ಬಾಯ್ಸ್ ಮೂಲಕ ಗಾಂಜಾ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತರಿಂದ ಒಟ್ಟು 5.20 ಲಕ್ಷ ರೂಪಾಯಿ ಮೌಲ್ಯದ 140 ಕೆಜಿ‌ ಗಾಂಜಾ ಜಪ್ತಿ ಮಾಡಲಾಗಿದೆ.
ganja

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂ ತರಗಪೇಟೆಯಲ್ಲಿ ನೆಡೆದ ಸ್ಪೋಟ ಪ್ರಕರಣ: ಗೋಡೌನ್ಸ್ ಸರ್ಚ್ ಗೆ ಮುಂದಾದ ದಕ್ಷಿಣ ವಿಭಾಗದ ಪೊಲೀಸರು