Select Your Language

Notifications

webdunia
webdunia
webdunia
webdunia

ಕೋವಿಡ್ ಹೆಲ್ಪ್ ಲೈನ್ ನಲ್ಲಿ ಕೆಲಸ ಮಾಡುವ ವಾರಿಯರ್ಸ್ ಗಳ ಗೊಳ್ಳು ಕೇಳುವವರು ಯಾರು ?

ಕೋವಿಡ್ ಹೆಲ್ಪ್ ಲೈನ್ ನಲ್ಲಿ ಕೆಲಸ ಮಾಡುವ ವಾರಿಯರ್ಸ್ ಗಳ ಗೊಳ್ಳು ಕೇಳುವವರು ಯಾರು ?
bangalore , ಬುಧವಾರ, 6 ಅಕ್ಟೋಬರ್ 2021 (21:24 IST)
ಕೋವಿಡ್ ಹೆಲ್ಪ್ ಲೈನ್ ನಲ್ಲಿ ಕೆಲಸ ಮಾಡುವ ವಾರಿಯರ್ಸ್ ಗಳ ಗೊಳ್ಳು ಕೇಳುವವರು ಯಾರು ಇಲ್ಲದಂತೆಯಾಗಿದೆ. ಕೊರೊನಾ ಟೈಮ್ ನಲ್ಲಿ ಮನೆ- ಮಠ ಬಿಟ್ಟು , ಜೀವದ ಹಂಗು ತೋರೆದು ಕಾರ್ಯನಿರ್ವಹಿಸುತ್ತಿದ್ದ  ವಾರಿಯರ್ಸ್ ಗಳಿಗೆ ಕಳೆದ ನಾಲ್ಕು ತಿಂಗಳಿಂದ ವೇತನವಾಗಿಲ್ಲ. ಒಂದು ತುತ್ತು ಅನ್ನ ತಿನ್ನುವುದಕ್ಕೂ ಈಗ ಪರದಾಡುವಂತೆಯಾಗಿದೆ.
ಕೊರೊನಾ ಟೈಮ್ ನಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ,ಜೀವದ ಹಂಗು ತೊರೆದು, ಪ್ರಾಣವನ್ನ ಪಾಟಕ್ಕೆ ಇಟ್ಟು , ಕುಟುಂಬದಿಂದ ದೂರವಾಗಿ ಕೋವಿಡ್ ಪೇಷೆಟ್ ಗಳಿಗಾಗಿ ಹಗಲು-ರಾತ್ರಿ ಎನ್ನದೇ ಹೆಲ್ಪಲೈನ್ ಸಿಬ್ಬಂದಿಗಳು ದುಡಿದಿದ್ದಾರೆ. ಆದ್ರೆ ಈಗ ಇವರ ಪರಿಸ್ಥಿತಿ ಆಕ್ಷರ ಸಹ ಚಿಂತಾಜನಕವಾಗೋಗಿದೆ. ಸುಮಾರು ಎರಡೂವರೆ ವರ್ಚದಿಂದ ಕೆಲಸ ಮಾಡ್ತಿದ್ದಾರೆ. ಆದ್ರೆ ಈಗ ಕಳೆದ 4,5 ತಿಂಗಳಿಂದ ವೇತನವಿಲ್ಲದೆ ವನವಾಸ ಅನುಭವಿಸುತ್ತಿದ್ದಾರೆ. ಇನ್ನೂ ಈ ಒಂದು ಹೆಲ್ಪ್ ಲೈನ್ ನಲ್ಲಿ ಗರ್ಭೀಣಿ ಮಹಿಳೆಯರು , ಅಂಗವಿಕಲರು ಸೇರಿದಂತೆ ಅನೇಕರು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಧಾನಿಯಲ್ಲಿ ಹಣವಿಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಹಣಬೇಕು, ಹೀಗಾಗಿ ಜನರು ವೇತನಕ್ಕಾಗಿ ದುಡಿಮೆ ಮಾಡಲು ಕೆಲಸಕ್ಕೆ ಸೇರ್ತಾರೆ. ಆದ್ರೆ ಈಗ ಹಗಲಿರುಳು ಎನ್ನದೇ ಕಷ್ಟಪಟ್ಟು ದುಡಿಮೆ ಮಾಡಿದ್ರು ಸಂಬಳವೇ ಇಲ್ಲದಂತೆಯಾಗಿದೆ. ಈಗ ವೇತನ ಕೊಡಿ ಎಂದು ಕೆಳಿದ್ರೆ ಫಂಡ್ ಇಲ್ಲ , ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ ಅಂತಾ ಹೇಳ್ತಾರಂತೆ , ಹಾಗಾದ್ರೆ ಇವರ ಪರಿಸ್ಥಿತಿ ಏನಾಗಬೇಕು..? ವೇತನ ಇಲ್ಲದೆ ಮನೆ ಬಾಡಿಗೆ , ಪಿಜಿ ಬಾಡಿಗೆ ಕಟ್ಟಲು ಆಗದೆ ವನವಾಸ ಅನುಭವಿಸುತ್ತಿದ್ದಾರೆ. ಇನ್ನೂ ಇದೇ ವಿಷಯವಾಗಿ ತುಂಬ ಕಷ್ಟ ಆಗ್ತಿದೆ. ಪಿಜಿ ಬಾಡಿಗೆ ಕಟ್ಟಿಲ್ಲ ಅಂತಾ ಪಿಜಿಯಿಂದ ಹೊರಗೆ ಹಾಕಿದ್ದಾರೆ. ನಮ್ಮ ಕಷ್ಟ ಯಾರಿಗೆ ಹೇಳೋನ್ನ ಕೇಳಿದ್ರೆ ಟರ್ಮಿನೇಟ್ ಮಾಡ್ತೇವೆ , ಹಾಗೆ ಹೀಗೆ ಎಂದು ಬೆದರಿಕೆ ಹಾಕ್ತಾರೆ ಎಂದು ತಮ್ಮ ಆಳಲನ್ನ ಹಂತ ಹಂತವಾಗಿ ತೋಡಿಕೊಂಡ್ರು
ಆರೋಗ್ಯ ಸಚಿವರು ಕೋವಿಡ್ ವಾರಿಯರ್ಸ್ ಗೆ ವೇತನವನ್ನ ಕೊಡ್ತೇವೆ ಜೊತೆಗೆ ಎಕ್ಟ್ರಾ ಭತ್ಯೆವನ್ನ ಕೊಡ್ತೇವೆ ಎಂದು ಒಂದು ಕಾಲದಲ್ಲಿ ಹೇಳಿದ್ರೂ ಆದ್ರೆ ಈಗ ನೋಡಿದ್ರೆ ಬರುವ ವೇತನವು ಬಾರದಂಗೆ ಆಗಿದೆ. ಇನ್ನೂ ಆರೋಗ್ಯ ಸಚಿವರು ಏನ್ ಮಾಡ್ತೀದ್ದಾರೆ? ಇದೇಲ್ಲಾ ಅವರ ಕಣ್ಣಿಗೆ ಕಾಣ್ತಲ್ವಾ? ಗೊತ್ತಿದ್ರೂ ಸುಮ್ಮನಿದ್ದಾರಾ? ಹೇಗೆ ಎಂಬ ಪ್ರಶ್ನೆ ಕಾಡ್ತಿದೆ. ಆದ್ರೆ ಆರೋಗ್ಯ ಸಚಿವರ ನಿರ್ಲಕ್ಷ್ಯಕ್ಕೆ ಕೋವಿಡ್ ವಾರಿಯರ್ಸ್ ಗಳು ವೇತನವಿಲ್ಲದೇ ನರಳಾಡುವಂತೆಯಾಗಿದೆ.ಇನ್ನಾದ್ರು ಆರೋಗ್ಯಸಚಿವರು ಇತ್ತಾ ಕಣ್ಣುಬಿಟ್ಟು ನೋಡಬೇಕಿದೆ. ವೇತನ ಇಲ್ಲದೆ ಪರದಾಡುತ್ತಿರುವ ಸಿಬ್ಬಂದಿಗಳ ಸಮಸ್ಯೆ ಬಗೆಹಾರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ.
covid

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ ಎರಡು ದಿನ ಭಾರಿ ಮಳೆ-ಹವಾಮಾನ ಇಲಾಖೆ