Select Your Language

Notifications

webdunia
webdunia
webdunia
webdunia

ರಾಜ್ಯಾದ್ಯಂತ ಎರಡು ದಿನ ಭಾರಿ ಮಳೆ-ಹವಾಮಾನ ಇಲಾಖೆ

ರಾಜ್ಯಾದ್ಯಂತ ಎರಡು ದಿನ ಭಾರಿ ಮಳೆ-ಹವಾಮಾನ ಇಲಾಖೆ
bangalore , ಬುಧವಾರ, 6 ಅಕ್ಟೋಬರ್ 2021 (21:19 IST)
ಬೆಂಗಳೂರು: ಬಂಗಾಳ ಉಪಸಾಗರದಲ್ಲಿ ವಾಯು ಭಾರ ಕುಸಿತವಾಗಿರುವ ಹಿನ್ನೆಲೆ ರಾಜ್ಯಾದ್ಯಂತ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆಕ
ಉತ್ತರ ಒಳನಾಡು ಪ್ರದೇಶಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಜ್ಯಾದ್ಯಂತ ಎರಡು ದಿನ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಸ್ವಲ್ಪ ಸಮಯ ಮಳೆ ಕಡಿಮೆಯಾಗಿ, ಸ್ವಲ್ಪ ಸಮಯ ಮಳೆ ಜಾಸ್ತಿ ಆಗಬಹುದು. ಬೆಂಗಳೂರಿನಲ್ಲಿ ಇಡೀ ರಾತ್ರಿ ತುಂತುರು ಮಳೆ ಆಗಿದೆ. ಇದೇ ರೀತಿ ಇನ್ನು ಎರಡು ದಿನ ಮಳೆ ಆಗುವ ಸಂಭವ ಇದೆ ಅಂತ ಹಿರಿಯ ವಿಜ್ಞಾನಿ ಗವಾಸ್ಕರ್ ತಿಳಿಸಿದ್ದಾರೆ.
 
 
ಜನಜೀವನ ಅಸ್ತವ್ಯಸ್ತ:
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು, ಮಧುಗುಂಡಿ, ನಿಡುವಳೆ ಸೇರಿ ವಿವಿಧೆಡೆ ಅಬ್ಬರದ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ಕಾಫಿ ಹಣ್ಣು ಉದುರಲು ಆರಂಭಿಸಿದ್ದು, ಬೆಳೆಗಾರರು ಚಿಂತೆಗೊಳಗಿದ್ದಾರೆ.
ಅಫಜಲಪುರ ತಾಲೂಕಿನ ಸಿದನೂರ ಹಳ್ಳ ತುಂಬಿ ಹರಿಯುತ್ತಿದ್ದು, ಪ್ರಾಣ ಪಣಕ್ಕಿಟ್ಟು ಗ್ರಾಮಸ್ಥರು ಹಳ್ಳದಾಟುತ್ತಿದ್ದಾರೆ. ಕಮಲನಗರ ತಾಲೂಕಿನ ಸೋನಾಳ ಗ್ರಾಮದ ರೈತರ ಸೋಯಾಬೀನ್​ ಬೆಳೆಗೆ ನೀರು ನುಗ್ಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿನಾಯಿ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಗಲಾಟೆ