Select Your Language

Notifications

webdunia
webdunia
webdunia
webdunia

ಬೀದಿನಾಯಿ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಗಲಾಟೆ

Riot between 2 families for street dog issue
bangalore , ಬುಧವಾರ, 6 ಅಕ್ಟೋಬರ್ 2021 (21:17 IST)
ಬೆಂಗಳೂರು: ಬೀದಿನಾಯಿ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು ಬೆಂಗಳೂರಿನ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ ಐಆರ್  ದಾಖಲಾಗಿದೆ.
ಮಲ್ಲೇಶ್ವರಂ ಆರ್.ವಿ.ಎನ್ ಕ್ಲೇವ್ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿರುವ ಅನುರಾಧ ಎಂಬುವವರು ಹಲವು ವರ್ಷಗಳಿಂದ ಬೀದಿ ನಾಯಿಗೆ ಊಟ ಹಾಕುತ್ತಿದ್ದಾರೆ. ಅನುರಾಧಾ ಮತ್ತು ಆಕೆಯ ಪತಿ ಶ್ರೀನಿವಾಸ್ ಬೀದಿನಾಯಿ ಸಾಕಿದ್ದಾರೆ. ಆದರೆ ಮೃದಲಾ, ಪ್ರಭಾಕರ್ ಎಂಬುವವರು ಆ ನಾಯಿಯನ್ನು‌ ಕಲ್ಲಿನಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಅನುರಾಧಾ ದೂರು ನೀಡಿದ್ದಾರೆ.
ಅದಕ್ಕೆ ಅನುರಾಧಾ ವಿರುದ್ಧ ಸರೋಜಾ ಎಂಬುವವರು ಪ್ರತಿ ದೂರು ದಾಖಲಿಸಿದ್ದಾರೆ.
ಅನುರಾಧ ಮತ್ತು ಪತಿ ಶ್ರೀನಿವಾಸ್ ಬೀದಿನಾಯಿಯನ್ನು ಸಾಕಿದ್ದಾರೆ. ಆ ಬೀದಿ ನಾಯಿಗೆ ಊಟ ಹಾಕಿ ಸುತ್ತ ಮುತ್ತ ಇರುವ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಅದೇ ನಾಯಿ ಹಲವಾರು ಬಾರಿ ಸ್ಥಳೀಯರಿಗೆ ಕಚ್ಚಲು ಬಂದಿದೆ. ಹೀಗಾಗಿ ಅದನ್ನು ಚೀಲದಿಂದ ಹೆದರಿಸಿ ಓಡಿಸಿದ್ದೇವೆ. ಈ ಬಗ್ಗೆ ಹೇಳಲು ಅನುರಾಧಾರ ಮನೆಗೆ ಹೋದರೆ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಮಲ್ಲೇಶ್ವರಂ ಠಾಣೆಯಲ್ಲಿ ಸರೋಜ ದೂರು ದಾಖಲಿಸಿದ್ದಾರೆ. ಸದ್ಯ ಬೀದಿ ಬಾಯಿಯಿಂದಾಗಿ ಎರಡು ಕುಟುಂಬಗಳ ನಡುವೆ ಬೀದಿ ಜಗಳ ಶುರುವಾಗಿದ್ದು ಒಬ್ಬರನೊಬ್ಬರು ಆರೋಪ-ಪ್ರತಿ ಆರೋಪ ಮಾಡಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಗಾಗಿ 99.74 ರಷ್ಟು ಪಠ್ಯ ಪುಸ್ತಕಗಳ ಮುದ್ರಣ