Select Your Language

Notifications

webdunia
webdunia
webdunia
webdunia

ಜಿಂಕೆ ಲೋಕದಲ್ಲಿ ಶ್ವಾನಗಳ ದರ್ಬಾರ್

webdunia
bangalore , ಬುಧವಾರ, 6 ಅಕ್ಟೋಬರ್ 2021 (20:35 IST)
ಬೆಂಗಳೂರು: ಹೇಳೋಕೆ ಅದು ಜಿಂಕೆ ಲೋಕ.. ಆದ್ರೆ ಜಿಂಕೆ ಲೋಕಕ್ಕೆ ಹೋದ್ರೆ ಮಂಕು ಬಡಿದು ಬಿಡುತ್ತೆ.. ಕೋಟಿ ಕೋಟಿ ಖರ್ಚು ಮಾಡಿ ಲೋಕಕ್ಕೇ ತಂಪಾಗ್ಲಿ ಅಂತ ಬಿಟ್ರೆ ಕೋಟೆಯನ್ನೇ ಹಾಳ್ ಮಾಡಿಬಿಡೋದಾ? ರೈಲಿದ್ರೂ ಓಡಲ್ಲ. ಮಕ್ಕಳಿದ್ರೂ ಆಟ ಆಡೋಕೆ ಆಗ್ತಿಲ್ಲ.ಜಿಮ್ ಉಪಕರಣಗಳಿದ್ರೂ ಯೂಸ್ ಆಗ್ತಿಲ್ಲ. ಪಾಲಿಕೆ ಮಾತ್ರ ಇತ್ತ ಗಮನ ಕೊಡ್ತಿಲ್ಲ.ಅಂದ್ಹಾಗೆ ಇಷ್ಟೆಲ್ಲಾ ಅವ್ಯವಸ್ಥೆಗಳ ಆಗರವಾಗಿರೋದು ಚಾಮರಾಜಪೇಟೆ ಬಳಿ ಇರುವ ಟಿಆರ್ ಮಿಲ್ನ ಜಿಂಕೆ ಪಾರ್ಕ್ ದೃಶ್ಯಗಳು.. ನಿರ್ಮಾಣವಾಗಿದ್ದ ಕಾಲದಲ್ಲಿ ನೂರಾರು ಮಕ್ಕಳು ಟ್ರೈನ್ ಹತ್ತಿ ಓಡಾಡ್ತಿದ್ರು.. ಜೋಕಾಲಿಯಲ್ಲಿ ಹಾಯಾಗಿ ಟೈಂ ಪಾಸ್ ಮಾಡ್ತಿದ್ರು.. ಆದ್ರೆ ಈಗ ಅದ್ಯಾವುದೂ ಇಲ್ಲ.. ಎಲ್ಲವೂ ಭೂತ ಬಂಗಲೆ ಹಾಗಿದೆ.. ಮಕ್ಕಳು ತಲೆ ಹಾಕೋಕೆ ಹೋಗ್ತಿಲ್ಲ..ಅಷ್ಟು ಹೀನಾಯ ಪರಿಸ್ಥಿತಿ ತಲುಪಿದೆ.
 
ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿ ಈ ಜಿಂಕೆ ಪಾರ್ಕ್ ನಿರ್ಮಾಣ ಮಾಡಿದ್ರು.. ಆದ್ರೆ ಇದು ಯೂಸ್ ಆಗಿದ್ದು ಮಾತ್ರ ಬೆರಳೆಣಿಕೆಯಷ್ಟು ವರ್ಷ ಮಾತ್ರ.. ಈಗ್ಯಾಕೆ ಈ ದುಸ್ಥಿತಿ ತಲುಪಿದೆ ಅಂದ್ರೆ ಅಲ್ಲಿನ ಸ್ಥಳೀಯರು ಹೇಳಿದ್ದರು. ಒಟ್ನಲ್ಲಿ ಪಾಲಿಕೆ ಹೊಸ ಹೊಸ ಪಾರ್ಕ್ ಕಟ್ಟಿ ಉದ್ಧಾರ ಮಾಡ್ತೀವಿ ಅಂತ ಬಡಾಯಿ ಕೊಚ್ಕೊಳ್ಳೋ ಬದ್ಲು ಇರೋದನ್ನೇ ಉದ್ಧಾರ ಮಾಡಿದ್ರೆ ಸಾಕು
dog

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಮೂರು ಸ್ಥಳಗಳ ಸುಂದರೀಕರಣಗೊಳಿಸಿದ ಕೇಂದ್ರ ವಸತಿ ಸಚಿವಾಲಯ