Select Your Language

Notifications

webdunia
webdunia
webdunia
webdunia

ಟಿವಿ ಲೋಕದಲ್ಲೂ ಶುರುವಾಯ್ತು 10 ಇಯರ್ಸ್ ಚಾಲೆಂಜ್ ಹವಾ

ಟಿವಿ ಲೋಕದಲ್ಲೂ ಶುರುವಾಯ್ತು 10 ಇಯರ್ಸ್ ಚಾಲೆಂಜ್ ಹವಾ
ಬೆಂಗಳೂರು , ಶುಕ್ರವಾರ, 18 ಜನವರಿ 2019 (10:10 IST)
ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಸೃಷ್ಟಿಸಿರುವ 10 ಇಯರ್ಸ್ ಚಾಲೆಂಜ್ ಇದೀಗ ಕನ್ನಡ ಟಿವಿ ಲೋಕಕ್ಕೂ ಕಾಲಿಟ್ಟಿದೆ.


ಐಸಿಸಿ ಇತ್ತೀಚೆಗಷ್ಟೇ ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಹಾವಭಾವ 10 ವರ್ಷದ ಮೊದಲು ಮತ್ತು ಈಗಲೂ ಒಂದೇ ರೀತಿ ಇದೆ ಎಂದು ತನ್ನ ಟ್ವಿಟರ್ ಪೇಜ್ ನಲ್ಲಿ ಫೋಟೋ ಪ್ರಕಟಿಸಿ ಟ್ರೆಂಡ್ ಸೃಷ್ಟಿಸಿತ್ತು. ಅದಾದ ಬಳಿಕ ಬಾಲಿವುಡ್ ಸೆಲೆಬ್ರಿಟಿಗಳೂ ತಮ್ಮ 10 ವರ್ಷದ ಹಳೆಯ ಮತ್ತು ಈಗಿನ ಫೋಟೋ ಪ್ರಕಟಿಸಿ ಟ್ರೆಂಡ್ ಮುಂದುವರಿಸಿದ್ದರು.

ಇದೀಗ 10 ಇಯರ್ಸ್ ಚಾಲೆಂಜ್ ಕನ್ನಡ ಟಿವಿ ಲೋಕಕ್ಕೂ ಕಾಲಿಟ್ಟಿದ್ದು, ಜೀ ಕನ್ನಡ ತನ್ನ ಲೋಗೋ, ಕಲಾವಿದರ ಫೋಟೋ ಪ್ರಕಟಿಸಿ ಹೊಸ ಹವಾ ಎಬ್ಬಿಸಿದೆ. ಜೋಡಿ ಹಕ್ಕಿ ಸೀರಿಯಲ್ ಖ್ಯಾತಿಯ ಜಾನಕಿ ಅಲಿಯಾಸ್ ಚೈತ್ರಾ ರಾವ್, ನಾಗಿಣಿ ಧಾರವಾಹಿಯ ದೀಕ್ಷಿತ್ ಶೆಟ್ಟಿ ಫೋಟೋ ಸೇರಿದಂತೆ ತನ್ನ ಲೋಗೋ 10 ವರ್ಷದ ಹಿಂದೆ ಹೇಗಿತ್ತು ಮತ್ತು ಈಗ ಹೇಗಿದೆ ಎಂದು ಹೋಲಿಕೆ ಮಾಡುವ ಫೋಟೋ ಪ್ರಕಟಿಸಿದೆ.

webdunia
10 ಇಯರ್ಸ್ ಚಾಲೆಂಜ್ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಸಾಮಾನ್ಯ ಜನರೂ ಈ ಸವಾಲಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ನೀವೂ ಮಾಡಿ ನೋಡಬಹುದು!














ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬರೀಶ್ ಹೆಸರಿನಲ್ಲಿ ಈ ಕೆಲಸ ನಡೆಯುತ್ತಿದೆ! ನಂಬಬೇಡಿ ಹುಷಾರ್!!