ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಿಡುವುದಕ್ಕೆ ಕಾರಣವೇನು: ಸದ್ಯದಲ್ಲೇ ಬಿಚ್ಚಿಡಲಿದ್ದಾರೆ ನಟಿ ಸಂಜನಾ ಬುರ್ಲಿ

Krishnaveni K
ಗುರುವಾರ, 24 ಅಕ್ಟೋಬರ್ 2024 (10:47 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಈಗ ನಾಯಕಿ ಸ್ನೇಹ ಪಾತ್ರ ಅಂತ್ಯವಾಗುತ್ತಿದೆ. ಅಷ್ಟಕ್ಕೂ ಸ್ನೇಹ ಪಾತ್ರ ಮಾಡುತ್ತಿರುವ ಸಂಜನಾ ಸೀರಿಯಲ್ ಬಿಡ್ತಿರೋದು ಯಾಕೆ ಎಂಬ ಪ್ರಶ್ನೆ ವೀಕ್ಷಕರಲ್ಲಿದೆ.

ಡಿಸಿ ಆಗಿರುವ ಸ್ನೇಹ ತನ್ನ ಅತ್ತೆ ಬಂಗಾರಮ್ಮನನ್ನು ದುಷ್ಟರ ಕೈಯಿಂದ ಕಾಪಾಡಿಕೊಂಡು ಮನೆಗೆ ಕಾರಿನಲ್ಲಿ ಬರುವಾಗ ಆಕ್ಸಿಡೆಂಟ್ ಆಗುತ್ತದೆ. ಈ ಅಪಘಾತದಲ್ಲಿ ಸ್ನೇಹ ಹಾಗೂ ಬಂಗಾರಮ್ಮ ಇಬ್ಬರೂ ಗಂಭೀರ ಗಾಯಗೊಳ್ಳುತ್ತಾರೆ. ಆ ಪೈಕಿ ಸ್ನೇಹ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸುತ್ತಾರೆ.

ಸ್ನೇಹ ಕ್ಯಾರೆಕ್ಟರ್ ಈ ರೀತಿ ಕೊನೆಯಾಗುತ್ತಿದೆ ಎಂದು ತಿಳಿದು ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸೀರಿಯಲ್ ನನ್ನು ನೋಡುತ್ತಿದ್ದುದೇ ಸ್ನೇಹ-ಕಂಠಿ ಜೋಡಿಗೋಸ್ಕರ. ಆದರೆ ಈಗ ಸ್ನೇಹಳನ್ನು ಸಾಯಿಸಿ, ಕಂಠಿಯನ್ನು ಒಂಟಿ ಮಾಡುವುದನ್ನು ನಾವು ಸಹಿಸಲು ಸಾಧ್ಯವೇ ಇಲ್ಲ. ನಾವು ಸೀರಿಯಲ್ ನೋಡಲ್ಲ ಎನ್ನುತ್ತಿದ್ದಾರೆ ವೀಕ್ಷಕರು.

ಇದರ ನಡುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸ್ನೇಹ ಪಾತ್ರ ಮಾಡುತ್ತಿರುವ ನಟಿ ಸಂಜನಾ ಬುರ್ಲಿಗೆ ನೀವು ಸೀರಿಯಲ್ ಬಿಡುತ್ತಿದ್ದೀರಾ, ಯಾಕೆ ಬಿಟ್ಟಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಇವರಿಗೆ ಸ್ನೇಹ ಸದ್ಯದಲ್ಲೇ ಲೈವ್ ಬಂದು ಎಲ್ಲಾ ಹೇಳ್ತೀನಿ ಎಂದಿದ್ದಾರೆ. ಹೀಗಾಗಿ ಸಂಜನಾ ಸೀರಿಯಲ್ ಬಿಡ್ತಿದ್ದಾರಾ, ಯಾಕೆ ಬಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್‌ಗೆ ಗಂಭೀರ ಕಾಯಿಲೆ: ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

ಫಿಲಿಪ್ಪೀನ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಶೆರಿ ಸಿಂಗ್: ಭಾರತದ ಬ್ಯೂಟಿಗೆ ಮಿಸೆಸ್‌ ಯೂನಿವರ್ಸ್ ಕಿರೀಟ

ಜಾಲಿವುಡ್‌ ಸ್ಟುಡಿಯೋದಲ್ಲಿ ನಡೆದ ಹೈಡ್ರಾಮಾ ಕುರಿತು ಮೌನ ಮುರಿದ ಕಿಚ್ಚ ಸುದೀಪ್‌

ಕಾಂತಾರ ಹಿಟ್ ಆದ ಬೆನ್ನಲ್ಲೇ ಬಿಗ್ ಸುದ್ದಿ ಕೊಟ್ಟ ಹೊಂಬಾಳೆ ಫಿಲಂಸ್: ಅಮಿತಾಭ್ ಜೊತೆ ರಿಷಬ್ ಶೆಟ್ಟಿ

ಕಾಲು ನೋವೆಂದು ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಉಮೇಶ್ ಗೆ ಗಂಭೀರ ಖಾಯಿಲೆ

ಮುಂದಿನ ಸುದ್ದಿ
Show comments