Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಗೆ ದಾರಿ ಮಾಡಲು ಎರಡು ಪ್ರಮುಖ ಧಾರವಾಹಿಗಳು ಕೊನೆಯಾಗ್ತಿವೆ

Big Boss Kiccha Sudeep

Krishnaveni K

ಬೆಂಗಳೂರು , ಬುಧವಾರ, 21 ಆಗಸ್ಟ್ 2024 (15:16 IST)
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಇದಕ್ಕಾಗಿ ಈಗ ಎರಡು ಧಾರವಾಹಿಗಳನ್ನು ಮುಕ್ತಾಯಗೊಳಿಸಲಾಗುತ್ತಿದೆ. ಅವು ಯಾವುವು ಇಲ್ಲಿದೆ ಡೀಟೈಲ್ಸ್.

ಕಲರ್ಸ್ ಕನ್ನಡಕ್ಕೆ ಹೆಚ್ಚು ಟಿಆರ್ ಪಿ ತಂದುಕೊಡುವುದು ಬಿಗ್ ಬಾಸ್ ಶೋ. ಅದೀಗ 11 ನೇ ಸೀಸನ್ ಗೆ ಕಾಲಿಡುತ್ತಿದೆ. ಪ್ರತೀ ಬಾರಿಯೂ ಬಿಗ್ ಬಾಸ್ ಶೋ ರಾತ್ರಿ 8 ಅಥವಾ 9 ಗಂಟೆ ಸ್ಲಾಟ್ ನಲ್ಲಿ ಪ್ರಸಾರವಾಗುತ್ತಿತ್ತು. ಈ ಪ್ರೈಮ್ ಟೈಮ್ ನಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಸೆಳೆಯಬಹುದಾಗಿದೆ.

ಇದೀಗ ಬಿಗ್ ಬಾಸ್ ಆರಂಭಿಸಲು ಕಲರ್ಸ್ ಕನ್ನಡ ಎರಡು ಧಾರವಾಹಿಗಳಿಗೆ ಮುಕ್ತಾಯ ಹಾಡುತ್ತಿದೆ. ಒಂದು ಇತ್ತೀಚೆಗಷ್ಟೇ ಆರಂಭವಾಗಿದ್ದ ಚುಕ್ಕಿತಾರೆ ಧಾರವಾಹಿ. ನವೀನ್ ಸಜ್ಜು, ಪುಟಾಣಿ ಮಹಿತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಚುಕ್ಕಿತಾರೆ ಸದ್ಯದಲ್ಲೇ ಕತೆ ಮುಗಿಸುತ್ತಿದೆ.

ಬಿಗ್ ಬಾಸ್ ಗಾಗಿ ದಾರಿ ಮಾಡಿಕೊಡುತ್ತಿರುವ ಇನ್ನೊಂದು ಧಾರವಾಹಿ ಕೆಂಡಸಂಪಿಗೆ. ಸದ್ಯದಲ್ಲೇ ಈ ಧಾರವಾಹಿಯೂ ಮುಕ್ತಾಯವಾಗಲಿದೆ. ಈಗಾಗಲೇ ಕೊನೆಯ ಸಂಚಿಕೆಗಳ ಚಿತ್ರೀಕರಣ ನಡೆದಿದೆ ಎನ್ನಲಾಗಿದೆ. ಕೆಂಡಸಂಪಿಗೆ ಆರಂಭದಲ್ಲಿ ಉತ್ತಮ ರೆಸ್ಪಾನ್ಸ್ ಪಡೆದಿದ್ದರೂ ಇತ್ತೀಚೆಗೆ ನಾಯಕಿ ಬದಲಾವಣೆಯಾದ ಮೇಲೆ ಕೊಂಚ ಡಲ್ ಹೊಡೆಯುತ್ತಿತ್ತು. ಇದೀಗ ಧಾರವಾಹಿ 500 ಕ್ಕೂ ಹೆಚ್ಚು ಕಂತುಗಳನ್ನು ಪೂರೈಸಿದ್ದು, ಮುಕ್ತಾಯದ ಹಂತದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲ್ಲ ಎಂದ ಡಾಲಿ ಧನಂಜಯ್: ಎಲ್ಲದಕ್ಕೂ ಡಿ ಬಾಸ್ ಕಾರಣನಾ