Select Your Language

Notifications

webdunia
webdunia
webdunia
webdunia

ಮತ್ತೆ ಭರ್ಜರಿಯಾಗಿ ಗಲ್ಲಿ ಕಿಚನ್ ಆರಂಭಿಸಿದ ಶೈನ್ ಶೆಟ್ಟಿ

ಮತ್ತೆ ಭರ್ಜರಿಯಾಗಿ ಗಲ್ಲಿ ಕಿಚನ್ ಆರಂಭಿಸಿದ ಶೈನ್ ಶೆಟ್ಟಿ
ಬೆಂಗಳೂರು , ಬುಧವಾರ, 2 ಸೆಪ್ಟಂಬರ್ 2020 (09:42 IST)
ಬೆಂಗಳೂರು: ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ತಮ್ಮ ಹಳೆಯ ಗಲ್ಲಿ ಕಿಚನ್ ಗೆ ಹೊಸ ರೂಪ ನೀಡಿ ಭರ್ಜರಿಯಾಗೇ ರಿ ಓಪನಿಂಗ್ ಮಾಡಿದ್ದಾರೆ.


ಬಿಗ್ ಬಾಸ್ ಗೆ ಹೋಗುವ ಮೊದಲು ಶೈನ್ ಶೆಟ್ಟಿಗೆ ಆದಾಯ ಕೊಡುತ್ತಿದ್ದುದು ಇದೇ ಗಲ್ಲಿ ಕಿಚನ್. ಫುಡ್ ಟ್ರಕ್ ನೆರವಿನಿಂದ ದೈನಂದಿನ ಜೀವನ ಸಾಗಿಸುತ್ತಿದ್ದ ಶೈನ್ ಈಗ ಬಿಗ್ ಬಾಸ್ ಗೆ ಹೋಗಿ ಬಂದ ಮೇಲೂ ಹಳೆಯ ವೃತ್ತಿಯನ್ನು ಮರೆತಿಲ್ಲ.

ಸ್ವಲ್ಪ ದೊಡ್ಡ ವಾಹನವನ್ನೇ ಖರೀದಿಸಿ ಅದನ್ನು ಫುಡ್ ಟ್ರಕ್ ಆಗಿ ಮಾರ್ಪಾಡು ಮಾಡಿದ್ದ ಶೈನ್ ಈಗ ಮತ್ತೆ ತಮ್ಮ ಫೇಮಸ್ ‘ಗಲ್ಲಿ ಕಿಚನ್’ ಫುಡ್ ಟ್ರಕ್ ನ್ನು ಪುನರಾರಂಭಿಸಿದ್ದಾರೆ. ಸ್ಯಾಂಡಲ್ ವುಡ್, ಕಿರುತೆರೆ ಸ್ಟಾರ್ ಗಳೇ ಬಂದು ಶೈನ್ ಗೆ ಶುಭ ಕೋರಿ ಗಲ್ಲಿ ಕಿಚನ್‍ ನ ಆಹಾರ ಸೇವಿಸಿ ಬೆನ್ನು ತಟ್ಟಿದ್ದಾರೆ. ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಪ್ರತಿ ನಿತ್ಯ ಸಂಜೆ ಶೈನ್ ಗಲ್ಲಿ ಕಿಚನ್ ತೆರೆದಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಬರ್ತ್ ಡೇಗೆ ಅಭಿಮಾನಿಗಳೇ ಮಾಡಿದ ವಿಡಿಯೋ ಸಾಂಗ್