Select Your Language

Notifications

webdunia
webdunia
webdunia
Sunday, 13 April 2025
webdunia

Rapper ಚಂದನ್ ಶೆಟ್ಟಿಗೆ ಮದುವೆಯಾಗಲು ಹುಡುಗಿ ಇದ್ದರೆ ಹೇಳಿ….!

Rapper
ಬೆಂಗಳೂರು , ಶುಕ್ರವಾರ, 3 ನವೆಂಬರ್ 2017 (09:46 IST)
ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ. ಇತ್ತೀಚೆಗೆ ತಮ್ಮ ರ್ಯಾಪ್ ಸಾಂಗ್ ಮೂಲಕ ರಾಜ್ಯ, ದೇಶದಲ್ಲೂ ಹೆಸರುವಾಸಿಯಾಗಿದ್ದಾರೆ. ಹೀಗಿರುವಾಗ ಚಂದನ್ ಶೆಟ್ಟಿ ಮದುವೆಯಾಗ ಬಯಸಿದ್ದಾರೆ. ಹೀಗಾಗಿ ಯಾರಿಗಾದರು ಮದುವೆಯಾಗುವ ಇಂಟರೆಸ್ಟ್ ಇದ್ದರೆ ಅವರನ್ನ ಸಂಪರ್ಕಿಸಬಹುದಂತೆ.

ಅಯ್ಯೋ ಹೀಗಂತ ನಾವ್ ಹೇಳ್ತಿಲ್ಲ. ಖುದ್ದು ಚಂದನ್ ಶೆಟ್ಟಿಯೇ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೀಗೆ ಮಾತನಾಡುತ್ತಿರುವಾಗ ಮದುವೆ ಪ್ರಸ್ತಾಪವಾಗಿದೆ. ತಮಗೆ ಮದುವೆ ಆಗುವ ಆಸಕ್ತಿಯಿದೆ ಎಂದು ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸ್ ಬಳಿ ಹೇಳಿಕೊಂಡಿದ್ದಾರೆ.

ಇದನ್ನ ಕೇಳಿದ ಶ್ರೀನಿವಾಸ್, ನಮ್ಮ ಹುಡುಗ ಚಂದನ್ ಶೆಟ್ಟಿ ಮದುವೆಗೆ ಸಿದ್ಧನಿದ್ದಾನೆ. ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದ ಶಾಂತಿಗ್ರಾಮ ನಿವಾಸಿ. ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ. ಸಂಗೀತ ಎಂದರೆ ಹೆಚ್ಚು ಆಸಕ್ತಿ. ಇದು ಬಿಟ್ಟರೆ ಬೇರೆ ದುರಭ್ಯಾಸಗಳಿಲ್ಲ. ಹೀಗಾಗಿ ಮದುವೆಯಾಗಲು ಇಷ್ಟವಿದ್ದವರು ಪ್ಲೀಸ್ ತಿಳಿಸಿ ಎಂದು ರಿಕ್ವೆಸ್ಟ್ ಮಾಡಿಕೊಂಡ್ರು.

ಚಂದನ್ ಶೆಟ್ಟಿಗೆ ಅವರ ತಂದೆ ಜಯ ಶ್ರೀನಿವಾಸ್ ಬಳಿ ಕೇಳಿಯೇ ಚಂದನ್ ಎಂದು ಹೆಸರಿಟ್ಟರಂತೆ. ಹೀಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ, 6, 15, 24, 5, 14, 23ನೇ ತಾರೀಕು ಹುಟ್ಟಿದ ಹೆಣ್ಣು ಮಕ್ಕಳಿಗೆ ಚಂದನ್ ಶೆಟ್ಟಿ ಮದುವೆಯಾಗುವ ಯೋಗವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಳು ಭಾಷಾ ಪ್ರೇಮ ಮೆರೆದ ನಟ ಜಗ್ಗೇಶ್