Publish Date: Fri, 27 Oct 2017 (08:13 IST)
Updated Date: Fri, 27 Oct 2017 (08:20 IST)
ನವದೆಹಲಿ: ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ಮದುವೆ ಸುದ್ದಿ ಮತ್ತೆ ಎದ್ದಿದೆ. ಎಲ್ಲೇ ಹೋದರೂ ಅವರ ಬಳಿ ಮದುವೆ ಯಾವಾಗ ಎಂದು ಕೇಳುವವರೇ. ಈಗ ಅವರಿಗೆ ಈ ಪ್ರಶ್ನೆ ಕೇಳಿರುವುದು ಬಾಕ್ಸರ್ ವಿಜೇಂದರ್ ಸಿಂಗ್.
ರಾಹುಲ್ ಭಯ್ಯಾ ಜನ ಕೇಳುತ್ತಿದ್ದಾರೆ. ಮದುವೆ ಯಾವಾಗ ಆಗುತ್ತೀರಿ?’ ಎಂದು ವಿಜೇಂದರ್ ರಾಹುಲ್ ಗೆ ಪ್ರಶ್ನಿಸಿದ್ದಾರೆ. ಜನ ಸಾಮಾನ್ಯರು ಯಾರೋ ಈ ಪ್ರಶ್ನೆ ಕೇಳಿದ್ದರೆ ಉತ್ತರಿಸದೇ ಸುಮ್ಮನಾಗುತ್ತಿದ್ದರೇನೋ. ಆದರೆ ವಿಜೇಂದರ್ ಗೆ ಉತ್ತರ ಹೇಳದಿರಲು ರಾಹುಲ್ ಗೆ ಸಾಧ್ಯವಾಗಲಿಲ್ಲ.
ಹಾಗಾಗಿ ನಗುತ್ತಲೇ ‘ಯಾವಾಗ ಆಗಬೇಕೋ ಆಗ ಆಗುತ್ತದೆ. ನನಗೆ ವಿಧಿಯ ಮೇಲೆ ನಂಬಿಕೆಯಿದೆ’ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ವಿಜೇಂದರ್, ನೀವು ಪ್ರಧಾನಿ ಪಟ್ಟದಲ್ಲಿರುವಾಗಲೇ ಮದುವೆಯಾದರೆ ವಿಶೇಷವಾಗಿರುತ್ತದೆ ಎಂದಿದ್ದಾರೆ. ಇದನ್ನೂ ರಾಹುಲ್ ಮುಗುಳ್ನಗುತ್ತಲೇ ಸ್ವೀಕರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ