Publish Date: Mon, 09 Dec 2019 (09:00 IST)
Updated Date: Mon, 09 Dec 2019 (09:01 IST)
ಬೆಂಗಳೂರು: ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡು ವಾರಗಳ ಹಿಂದಷ್ಟೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ರಕ್ಷಾ ಸೋಮಶೇಖರ್ ಈ ವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಕಿರು ಅವಧಿಯಲ್ಲೇ ಬಿಗ್ ಬಾಸ್ ನಿಂದ ಹೊರಬರಲು ವೈಲ್ಡ್ ಕಾರ್ಡ್ ಎಂಟ್ರಿಯೇ ಕಾರಣವಾಗಿರಬಹುದು ಎಂದು ರಕ್ಷಾ ಅಭಿಪ್ರಾಯಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೇ ಇರುವ ಎಲ್ಲರಿಗೂ ಅವರದ್ದೇ ಆದ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ನನಗೆ ಹೆಚ್ಚು ಸಮಯ ಸಿಗಲಿಲ್ಲ. ಹೀಗಾಗಿ ನಾಮಿನೇಟ್ ಆದಾಗ ನಾನೇ ಟಾರ್ಗೆಟ್ ಆದೆ ಎಂದು ರಕ್ಷಾ ಹೊರಬಂದ ಬಳಿಕ ಹೇಳಿಕೊಂಡಿದ್ದಾರೆ.
ಇನ್ನು, ಬಿಗ್ ಬಾಸ್ ಮನೆಯಲ್ಲಿರುವ ಪ್ರತಿಯೊಬ್ಬರ ಬಗ್ಗೆ ಏನನ್ನಾದರೂ ಹೇಳಿ ಎಂದಾಗ ರಕ್ಷಾ ಒಬ್ಬೊಬ್ಬರ ಬಗ್ಗೆ ಒಂದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಿಶನ್ ಮುದ್ದು, ದೀಪಿಕಾಗೆ ಕೋಪ ಜಾಸ್ತಿ, ಶೈನ್ ತುಂಬಾ ಸ್ಟ್ರಾಂಗ್, ಚಂದನಾ ಇನ್ನೊಬ್ಬರ ನೆರಳಲ್ಲಿ ಇರುವಾಕೆ, ಚಂದನ ಆಚಾರ್ ಮನೆಯೊಳಗೆ ಬೇರೆ, ಟಾಸ್ಕ್ ನಲ್ಲಿ ಬೇರೆ ರೀತಿ ಇರ್ತಾರೆ, ಪ್ರಿಯಾಂಕ ವೈಸ್ ಕ್ಯಾಪ್ಟನ್ ಥರಾ ಇರ್ತಾರೆ, ರಾಜು ತಾಳಿಕೋಟೆ ರಾಜಕಾರಣ ಥರಾ ಇರ್ತಾರೆ ಎಂದಿದ್ದಾರೆ.