Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜತೆ ಸಲ್ಮಾನ್ ಖಾನ್!

ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜತೆ ಸಲ್ಮಾನ್ ಖಾನ್!
ಬೆಂಗಳೂರು , ಭಾನುವಾರ, 8 ಡಿಸೆಂಬರ್ 2019 (09:10 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ.


ಸಲ್ಮಾನ್ ಹಿಂದಿ ಬಿಗ್ ಬಾಸ್ ಅವತರಣಿಕೆಯನ್ನು ನಡೆಸಿಕೊಡುತ್ತಾರೆ. ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಗೆ ವಿಲನ್ ಆಗಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಸ್ನೇಹ ಸಂಬಂಧ ಚೆನ್ನಾಗಿದೆ. ಹೀಗಾಗಿ ಅಭಿಮಾನಿಗಳು ಇತ್ತೀಚೆಗೆ ಕನ್ನಡ ಬಿಗ್ ಬಾಸ್ ವೇದಿಕೆಗೆ ಕರೆ ತನ್ನಿ ಎಂದು ಅಭಿಮಾನಿಗಳು ಮನವಿ ಮಾಡಿದ್ದರು.

ಇದೀಗ ಅವರ ಕನಸು ನನಸಾಗಿದೆ. ಹಿಂದಿ ಬಿಗ್ ಬಾಸ್ ವೇದಿಕೆಯಿಂದ ಸಲ್ಮಾನ್ ಕನ್ನಡ ಬಿಗ್ ಬಾಸ್ ವೇದಿಕೆಯಲ್ಲಿರುವ ಕಿಚ್ಚ ಸುದೀಪ್ ಮತ್ತು ಕನ್ನಡ ಅಭಿಮಾನಿಗಳ ಜತೆ ಮಾತನಾಡಿದ್ದಾರೆ. ಸಲ್ಮಾನ್ ಮಾತ್ರವಲ್ಲದೆ, ದಬಾಂಗ್ 3 ನಿರ್ದೇಶಕ ಪ್ರಭುದೇವ, ನಾಯಕಿ ಸೊನಾಕ್ಷಿ ಸಿನ್ಹಾ ಕೂಡಾ ಈ ವೇಳೆ ಕಾಣಿಸಿಕೊಂಡಿದ್ದಾರೆ. ಕಿಚ್ಚನ ಈ ಚಮಕ್ ಗೆ ಪ್ರೇಕ್ಷಕರು ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾವನ ಜತೆ ಮಧುಮಗಳಂತೆ ಫೋಟೋ ತೆಗೆಸಿಕೊಂಡ ರಚಿತಾ ರಾಮ್ ನೋಡಿ ನೆಟ್ಟಿಗರು ಕನ್ ಫ್ಯೂಸ್!