Select Your Language

Notifications

webdunia
webdunia
webdunia
webdunia

ಕಾಳಿದಾಸ ಕನ್ನಡ ಮೇಷ್ಟ್ರು ಮೆಚ್ಚಿದ ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್

ಕಾಳಿದಾಸ ಕನ್ನಡ ಮೇಷ್ಟ್ರು ಮೆಚ್ಚಿದ ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್
ಬೆಂಗಳೂರು , ಭಾನುವಾರ, 8 ಡಿಸೆಂಬರ್ 2019 (09:19 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.


ಕನ್ನಡ ಶಾಲೆಗಳ ವ್ಯಥೆ-ಕತೆ ಬಗ್ಗೆ ಬೆಳಕು ಚೆಲ್ಲಿರುವ ಸಾಮಾಜಕ್ಕೆ ಒಳ್ಳೆಯ ಸಂದೇಶವನ್ನು ಹಾಸ್ಯ ರೂಪದಲ್ಲಿ ನೀಡಿರುವ ಸದಭಿರುಚಿಯ ಚಿತ್ರವಿದು. ಈ ಸಿನಿಮಾವನ್ನು ಇದೀಗ ದಕ್ಷ ಪೊಲೀಸ್ ಅಧಿಕಾರಿ ಎಂದೇ ಹೆಸರು ಮಾಡಿರುವ ರವಿ ಡಿ ಚೆನ್ನಣ್ಣನವರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಾನು ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳನ್ನು ನೋಡ್ತೀನಿ. ಕಾಳಿದಾಸ ಕನ್ನಡ ಮೇಷ್ಟ್ರು ಈ ವರ್ಷ ನಾನು ನೋಡಿದ ಮೂರು ಅತೀ ಶ್ರೇಷ್ಠ ಸಿನಿಮಾಗಳಲ್ಲಿ ಒಂದು’ ಎಂದು ರವಿ ಚೆನ್ನಣ್ಣನವರ್ ಹೇಳಿಕೊಂಡಿದ್ದಾರೆ. ಸ್ವತಃ ಜಗ್ಗೇಶ್ ರವಿ ಚೆನ್ನಣ್ಣನವರ್ ಅವರ ಮೆಚ್ಚುಗೆಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕಿರುತೆರೆಗೆ ಉಮಾಶ್ರೀ: ಯಾವ ಧಾರವಾಹಿಯಲ್ಲಿ ನಟಿಸ್ತಾರೆ ಗೊತ್ತಾ?