Publish Date: Sun, 19 Nov 2023 (10:12 IST)
Updated Date: Sun, 19 Nov 2023 (10:12 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ವೇದಿಕೆಯಲ್ಲಿ ವಾರಂತ್ಯದ ಮಾತುಕತೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ತಮ್ಮ ನಿಜವಯಸ್ಸು ಬಹಿರಂಗಪಡಿಸಿದ್ದಾರೆ.
ಡ್ರೋನ್ ಪ್ರತಾಪ್ ತಂದೆ ಕಿಚ್ಚ ಸುದೀಪ್ ಅಭಿಮಾನಿ. ಚಿಕ್ಕ ವಯಸ್ಸಿನಿಂದ ನಿಮ್ಮನ್ನು ನೋಡುತ್ತಾ ಬಂದಿದ್ದಾರೆ ಎಂದು ಹೇಳಿದಾಗ ಸುದೀಪ್ ಹಾಗಿದ್ದರೆ ನನ್ನ ವಯಸ್ಸೆಷ್ಟು ಎಂದು ತಮಾಷೆ ಮಾಡಿದರು.
ಬಳಿಕ ಕಾರ್ತಿಕ್ ಗೆ ನನ್ನ ವಯಸ್ಸು ಎಷ್ಟಿರಬಹುದು ಎಂದು ಊಹಿಸಲು ಹೇಳಿದರು. ಆಗ ಕಾರ್ತಿಕ್ 30 ಎಂದರು. ಆದರೆ ಸುದೀಪ್ ನನ್ನ ವಯಸ್ಸು 29 ದಾಟುವುದೇ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಸುದೀಪ್ ಗೆ ಈಗ 50 ವರ್ಷ. ಆದರೆ ಅವರ ಫಿಟ್ನೆಸ್, ಲವಲವಿಕೆ ನೋಡಿದರೆ ಹಾಗನಿಸುವುದೇ ಇಲ್ಲ.