ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ದೊಡ್ಡ ಹೆಸರುಗಳೇ ನಾಮಿನೇಟ್ ಆಗಿವೆ. ಹೀಗಾಗಿ ಈ ವಾರ ದೊಡ್ಡ ವಿಕೆಟ್ ಬೀಳೋದು ಖಂಡಿತಾ.
ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರ ಲಿಸ್ಟ್ ನಲ್ಲಿ ನೀತು ವನಜಾಕ್ಷಿ, ಭಾಗ್ಯಶ್ರೀ, ತನಿಷಾ ಕುಪ್ಪಂಡ, ವಿನಯ್ ಗೌಡ, ಈಶಾನಿ ಮುಂತಾದ ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ.
ಹೀಗಾಗಿ ಈ ವಾರ ದೊಡ್ಡ ವಿಕೆಟ್ ಪತನವಾಗುವುದು ಗ್ಯಾರಂಟಿ. ಅಥವಾ ಎಲಿಮಿನೇಷನ್ ನಲ್ಲಿ ಏನಾದರೂ ಟ್ವಿಸ್ಟ್ ಇದೆಯೇ ಎಂದು ನೋಡಲು ಕಿಚ್ಚನ ಜೊತೆಗಿನ ಮಾತುಕತೆ ವೀಕ್ಷಿಸಬೇಕಿದೆ.
ಇನ್ನು, ಈ ವಾರ ದೊಡ್ಮನೆ ಆಟದಲ್ಲಿ ಅತ್ಯುತ್ತಮವಾಗಿ ಆಡಿದ ತುಕಾಲಿ ಸಂತೋಷ್ ಅತ್ಯುತ್ತಮ ಪಟ್ಟ ಪಡೆದುಕೊಂಡಿದ್ದಾರೆ. ತನಿಷಾ ಕುಪ್ಪಂಡಗೆ ಕಳಪೆ ಪಟ್ಟಿ ಸಿಕ್ಕಿದ್ದು ಜೈಲು ಸೇರಿದ್ದಾರೆ. ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿರುವ ತನಿಷಾ ಈ ವಾರ ನಿರೀಕ್ಷಿತ ಮಟ್ಟದಲ್ಲಿ ಆಡಲಿಲ್ಲ ಎನ್ನುವ ಕಾರಣಕ್ಕೆ ಮನೆಯವರು ಕಳಪೆ ಹಣೆಪಟ್ಟಿ ನೀಡಿದ್ದಾರೆ.