ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕಿಚ್ಚ ಸುದೀಪ್ ಇದುವರೆಗೆ ಮಾಡಿರದ ಕೆಲಸವೊಂದನ್ನು ಮಾಡಿದ್ದಾರೆ. ಪ್ರೇಕ್ಷಕರ ಬಳಿ ಕ್ಷಮೆ ಯಾಚಿಸಿದ್ದಾರೆ.
ಈ ಬಾರಿ ನಾಮಿನೇಷನ್ ನಲ್ಲಿ ಸ್ಪರ್ಧಿ ವರ್ತೂರು ಸಂತೋಷ್ ಸೇಫ್ ಆಗಿದ್ದರು. ಹಾಗಿದ್ದರೂ ಅವರು ಮನೆಯಿಂದ ಹೊರ ಹೋಗಲು ಬಯಸಿದ್ದರು. ಅವರ ಮನ ಒಲಿಸಲು ಕಿಚ್ಚ ಎಲ್ಲಾ ಪ್ರಯತ್ನ ನಡೆಸಿದರು.
ಕೊನೆಗೆ ಕೇವಲ 24 ಗಂಟೆಯಲ್ಲಿ 34.5 ಲಕ್ಷ ಮತ ನಿಮಗೆ ವೀಕ್ಷಕರು ಹಾಕಿದ್ದಾರೆ ಎಂದರು. ಆದರೂ ವರ್ತೂರು ಮನಸ್ಸು ಬದಲಾಯಿಸಲಿಲ್ಲ. ಹೀಗಾಗಿ ಕಿಚ್ಚ ಸುದೀಪ್ ವರ್ತೂರು ಪರವಾಗಿ ವೀಕ್ಷಕರ ಬಳಿ ವೇದಿಕೆಯಲ್ಲೇ ಕ್ಷಮೆ ಯಾಚಿಸಿದರು. ಜನರ ತೀರ್ಪಿಗೆ ವಿರುದ್ಧವಾಗಿ ನಾನು ಹೋಗುವುದಿಲ್ಲ. ನಾನು ನಾಮಿನೇಷನ್ ಪ್ರಕ್ರಿಯೆ ರದ್ದುಗೊಳಿಸುತ್ತೇನೆ. ಇನ್ನು ಉಳಿದಿದ್ದು ನಿಮ್ಮ ನಿರ್ಣಯ ಎಂದು ವೇದಿಕೆ ಬಿಟ್ಟು ತೆರಳಿದ್ದಾರೆ.