ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಎರಡನೇ ಬಾರಿ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ದಂಪತಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಆದರೆ ಅನುಷ್ಕಾ ಕ್ಯಾಮರಾ ಕಣ್ಣಿನಿಂದ ಆದಷ್ಟು ತಪ್ಪಿಸಿಕೊಳ್ಳುತ್ತಿರುವುದು, ಆಕೆಯ ಉಡುಗೆ, ತೊಡುಗೆಗಳನ್ನು ನೋಡಿದರೆ ಆಕೆ ಗರ್ಭಿಣಿ ಎಂಬ ಸುದ್ದಿ ನಿಜವೆನಿಸುತ್ತದೆ. ಜೊತೆಗೆ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ದೀಪಾವಳಿ ಸೆಲೆಬ್ರೇಷನ್ ನಲ್ಲಿ ಅನುಷ್ಕಾ ಕೂಡಾ ಭಾಗಿಯಾಗಿದ್ದು ಸಲ್ವಾರ್ ತೊಟ್ಟು ಕೊಹ್ಲಿ ಜೊತೆ ಬಂದಿದ್ದಾರೆ. ಆದರೆ ಕ್ಯಾಮರಾ ಕಾಣುತ್ತಿದ್ದಂತೇ ವೇಲ್ ಹಿಡಿದು ಉಬ್ಬುಹೊಟ್ಟೆ ಮರೆಮಾಚಲು ನೋಡಿದ್ದಾರೆ. ಆದರೆ ಗ್ರೂಪ್ ಫೋಟೋ ವೇಳೆ ಅನುಷ್ಕಾ ಉಬ್ಬುಹೊಟ್ಟೆ ಸ್ಪಷ್ಟವಾಗಿ ಗೋಚರವಾಗಿದೆ.
ಇನ್ನು, ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರುವಾಗಲೂ ಅನುಷ್ಕಾ ಸಲ್ವಾರ್ ತೊಟ್ಟು ಹೊಟ್ಟೆ ಪೂರ್ತಿ ವೇಲ್ ನಿಂದ ಮರೆಮಾಚಿದ್ದಾರೆ. ಹೀಗಾಗಿ ತಮ್ಮ ಹೊಟ್ಟೆ ಮೇಲೆ ಕ್ಯಾಮರಾ ಕಣ್ಣು ಬೀಳದಂತೆ ಅನುಷ್ಕಾ ಸಲ್ವಾರ್ ಮೊರೆ ಹೋಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.