Publish Date: Sun, 12 Nov 2023 (07:34 IST)
Updated Date: Sun, 12 Nov 2023 (07:38 IST)
ಕೇವಲ ಕಿಸ್ ಕೊಡುವುದು ಮಾತ್ರವಲ್ಲ ನಟನೆಯ ವಿಷಯದಲ್ಲೂ ಸಹಿತ ಮುಂದೆ ಇದ್ದ ಕಾರಣ ಆತನನ್ನು ಬಾಲಿವುಡ್ ಇನ್ನು ಉಳಿಸಿಕೊಂಡಿದೆ ಎಂದೇ ಹೇಳಬಹುದಾಗಿದೆ. ಇಂತಹ ಕಿಸ್ ಕಲಾವಿದ ಈಗ ಹಾಟ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಜೊತೆ ನಟಿಸಲು ನೋ ಎಂದಿದ್ದಾರೆ.
ಇಮ್ರಾನ್ ಅವರ ಮುಂದಿನ ಚಿತ್ರ ಉಂಗ್ಲಿಯಲ್ಲಿ ಒಂದು ಐಟಂ ಸಾಂಗ್‌ನಲ್ಲಿ ಆಕೆಯ ಜೊತೆ ಹೆಜ್ಜೆ ಹಾಕಲು ನಿರ್ಮಾಪಕರು ಇಚ್ಚಿಸಿದರೆ ಈ ಬಗ್ಗೆ ತನ್ನ ಪ್ರತಿಕ್ರಿಯೆ ತೋರಿರುವ ಇಮ್ರಾನ್ ಹಶ್ಮಿ ಇಲ್ಲ ತಾನು ಆಕೆಯೊಂದಿಗೆ ಡ್ಯಾನ್ಸ್ ಮಾಡಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ಇಮ್ರಾನ್ ಹಶ್ಮಿ ಇದ್ದ ಕಡೆ ಮುತ್ತಿನ ಸುರಿಮಳೆ ಇರಲಿ ಬೇಕು.ಕಿಸ್‌ಗೆ ಒಂದು ಮರ್ಯಾದೆ ತಂದುಕೊಟ್ಟ ನಟ ಆತ. ತನಗೆ ಸಿಕ್ಕ ಯಾವುದೇ ಚಿತ್ರ ಆಗಿರಲಿ ಅಲ್ಲಿ ಕಿಸ್ ಇರಲೇ ಬೇಕು ಇಲ್ಲದೆ ಇದ್ದರೆ ಪ್ರೇಕ್ಷಕರು ಸಾಕಷ್ಟು ಮಿಸ್ ಮಾಡಿಕೊಳ್ತಾರೆ ಎನುವ ಸಿದ್ಧಾಂತ ಹೊಂದಿರುವ ಕಲಾವಿದ ಆತ.
ವಯಸ್ಕರಿಗೆ ಕಾಮಶಿಕ್ಷಣ ಹೇಳಿಕೊಡುವ ಸನ್ನಿ ಜೊತೆ ತಾನು ಅಭಿನಯಿಸಲಾರೆ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ. ಈ ಕಾರಣದಿಂದ ನಿರ್ಮಾಪಕರು ಈಕೆ ಜಾಗದಲ್ಲಿ ಇಂಟರ್ ನ್ಯಾಷನಲ್ ಮಾಡೆಲ್ಸ್ ಗಳನ್ನು ಹುಡುಕಲು ಆರಂಭ ಮಾಡಿದ್ದಾರೆ.