Publish Date: Sat, 28 Oct 2023 (15:19 IST)
Updated Date: Sat, 28 Oct 2023 (15:37 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಗಟ್ಟಿಮೇಳ ಪ್ರೇಕ್ಷಕರಿಗೆ ಒಂದು ಬ್ಯಾಡ್ ನ್ಯೂಸ್.
ಧಾರವಾಹಿ ಆರಂಭವಾಗಿ ನಾಲ್ಕು ವರ್ಷವೇ ಕಳೆದರೂ ಈಗಲೂ ಟಿಆರ್ ಪಿ ಪಟ್ಟಿಯಲ್ಲಿ ನಂ.1 ಅಥವಾ 2 ಸ್ಥಾನದಲ್ಲೇ ಗಟ್ಟಿಮೇಳ ಪ್ರಸಾರ ಕಾಣುತ್ತಿರುವುದು ವಿಶೇಷ. ಗಟ್ಟಿಮೇಳ ಧಾರವಾಹಿಗೆ ಅಷ್ಟೊಂದು ಫ್ಯಾನ್ ಫಾಲೋವರ್ಸ್ ಇದ್ದಾರೆ.
ಕಿರುತೆರೆಯ ಜನಪ್ರಿಯ ಹೀರೋ ರಕ್ಷ್ ಮತ್ತು ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರದಲ್ಲಿರುವ ಗಟ್ಟಿಮೇಳ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು ಸದ್ಯದಲ್ಲಿಯೇ ಧಾರವಾಹಿ ಮುಕ್ತಾಯ ಕಾಣಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್ ವೇಳೆಗೆ ಧಾರವಾಹಿ ಅಂತ್ಯವಾಗಲಿದೆ ಎಂದು ಈ ಮೊದಲು ಸುದ್ದಿಯೊಂದು ಹರಿದಾಡಿತ್ತು. ಇದೀಗ ಕತೆ ಪ್ರಮುಖ ಘಟ್ಟದಲ್ಲಿ ಬಂದು ನಿಂತಿದ್ದು ಸದ್ಯದಲ್ಲೇ ಮುಕ್ತಾಯ ಕಾಣಲಿದೆ ಎನ್ನಲಾಗುತ್ತಿದೆ.