ಬೆಂಗಳೂರು: ಕನ್ನಡ ಕಿರುತೆರೆಯ ಸ್ಟಾರ್ ದಂಪತಿ ಚಂದನ್ ಕುಮಾರ್-ಕವಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ?
ಇತ್ತೀಚೆಗೆ ಚಂದನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕವಿತಾ ಜೊತೆಗಿರುವ ಫೋಟೋವೊಂದನ್ನು ಪ್ರಕಟಿಸಿದ್ದರು. ಆ ಫೋಟೋದಲ್ಲಿ ಕವಿತಾ ಉಬ್ಬು ಹೊಟ್ಟೆ ನೋಡಿ ನೆಟ್ಟಿಗರು ಅದಾಗಲೇ ಅಭಿನಂದನೆ ಸಲ್ಲಿಸಲು ಶುರು ಮಾಡಿದ್ದಾರೆ. ವಿಶೇಷವೆಂದರೆ ಚಂದನ್ ಕೂಡಾ ಇದನ್ನು ಅಲ್ಲಗಳೆದಿಲ್ಲ.
ಸದ್ಯಕ್ಕೆ ಕವಿತಾ ನಟನೆಯಿಂದ ಬ್ರೇಕ್ ಪಡೆದಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ 2021 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.