Publish Date: Sat, 18 Nov 2023 (09:40 IST)
Updated Date: Sat, 18 Nov 2023 (09:48 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಚಾರವಾಗಿ ಕನ್ನಡಿಗರ ಆಕ್ರೋಶಕ್ಕೊಳಗಾಗಿದ್ದರು. ಇದೀಗ ಆ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾರೆ.
ನಡೆದಿದ್ದೇನು?: ನಟ ಲೂಸ್ ಮಾದ ಯೋಗಿ ತಮ್ಮ ನಟನೆಯ ರೋಸಿ ಎನ್ನುವ ಸಿನಿಮಾದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮದಲ್ಲಿ ತಮಿಳಿನಲ್ಲಿ ಮಾತನಾಡಿದ್ದಾರೆ. ವಿವೇಕ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಕನ್ನಡದಲ್ಲಿ ಮಾತು ಆರಂಭಿಸಿ ಬಳಿಕ ತಮಿಳಿನಲ್ಲಿ ಮಾತು ಮುಂದುವರಿಸಿದ್ದಾರೆ.
ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿ ತಮಿಳು ಭಾಷಿಕರು ಹೆಚ್ಚಾಗಿದ್ದರಿಂದ ಯೋಗಿ ತಮಿಳಿನಲ್ಲಿ ಮಾತನಾಡಿದ್ದರು. ಆದರೆ ಕನ್ನಡ ಕಾರ್ಯಕ್ರಮದಲ್ಲಿ, ಕನ್ನಡ ನಟನಾಗಿದ್ದುಕೊಂಡು ತಮಿಳಿನಲ್ಲಿ ಮಾತಾಡಿದ್ದರಿಂದ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಈ ಕಾರಣಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಯೋಗಿ ಕ್ಷಮೆ ಕೇಳಿದ್ದಾರೆ. ನಾನು ಮೊದಲು ಕನ್ನಡದಲ್ಲಿ ಮಾತು ಆರಂಭಿಸಿ ನಡುವಿನಲ್ಲಿ ಮಾತ್ರ ಸ್ವಲ್ಪ ತಮಿಳು ಮಾತನಾಡಿದ್ದೆ. ಕೊನೆಯಲ್ಲಿ ಕನ್ನಡದಲ್ಲಿಯೇ ಮಾತು ಮುಗಿಸಿದ್ದೆ. ಹಾಗಿದ್ದರೂ ನನ್ನಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.