ಬೆಂಗಳೂರು: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಇದೀಗ ತಮ್ಮ ದೈನಂದಿನ ಕೆಲಸಗಳಿಗೆ ವಿರಾಮ ನೀಡಿ ದೀಪಾವಳಿ ಹಬ್ಬದ ಸೆಲೆಬ್ರೇಷನ್ ಮೂಡ್ ನಲ್ಲಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡಾ ಇದಕ್ಕೆ ಹೊರತಲ್ಲ. ಸುದೀಪ್ ತಮ್ಮ ಮಗಳು ಸಾನ್ವಿ, ಪತ್ನಿ ಪ್ರಿಯಾ ಜೊತೆ ದೀಪಾವಳಿ ಹಬ್ಬದ ಸಂಭ್ರಮಾಚರಿಸಿದ್ದಾರೆ.
ಇವರ ಕ್ಯೂಟ್ ಫ್ಯಾಮಿಲಿ ಫೋಟೋವನ್ನು ಸಾನ್ವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಪತ್ನಿ, ಮಗಳ ಜೊತೆ ಸುದೀಪ್ ಪಕ್ಕಾ ಫ್ಯಾಮಿಲಿ ಮ್ಯಾನ್ ಪೋಸ್ ಕೊಟ್ಟಿದ್ದಾರೆ. ಕಿಚ್ಚನ ಕ್ಯೂಟ್ ಫ್ಯಾಮಿಲಿ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ.