Select Your Language

Notifications

webdunia
webdunia
webdunia
webdunia

ಬಚ್ಚನ್ ಕುಟುಂಬಕ್ಕೆ ದೀಪಾವಳಿ ತುಂಬಾನೇ ಸ್ಪೆಷಲ್

ಬಚ್ಚನ್ ಕುಟುಂಬಕ್ಕೆ ದೀಪಾವಳಿ ತುಂಬಾನೇ ಸ್ಪೆಷಲ್
mumbai , ಸೋಮವಾರ, 13 ನವೆಂಬರ್ 2023 (13:18 IST)
ನವೆಂಬರ್ 1 ರಂದು ಐಶ್ ಬರ್ತಡೇ, ಇನ್ನು ನವೆಂಬರ್ 16 ಕ್ಕೆ ಮಗಲು ಆರಾಧ್ಯಳ ಹುಟ್ಟುಹಬ್ಬ,ಇದೇ ಸಮಯದಲ್ಲಿ ದೀಪಾವಳಿ ಹಬ್ಬ ಕೂಡ ಆಚರಿಸಲಾಗುತ್ತದೆ. ಇನ್ನು ನವೆಂಬರ್ 20ಕ್ಕೆ ಐಶ್ವರ್ಯಾ ರೈ ತಂದೆಯ ಹುಟ್ಟಹಬ್ಬವಂತೆ. ಹಾಗಾಗಿ ಪ್ರತಿ ವರ್ಷ ನಾವು ನವೆಂಬರ್ ತಿಂಗಳಲ್ಲಿ ಸಂಭ್ರಮದಲ್ಲಿಯೇ ಇರುತ್ತೇವೆ. ಈ ಬಾರಿ ದೀಪಾವಳಿ ಕೂಡ ಜೊತೆಯಾಗಿ ಬಂದಿರೋದರಿಂದ ಖುಷಿ ಇನ್ನಷ್ಟು ಹೆಚ್ಚಾಗಿದೆ ಅಂತಾ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
 
 
ಈ ಬಾರಿಯ ದೀಪಾವಳಿ ಬಚ್ಚನ್ ಕುಟುಂಬಕ್ಕೆ ತುಂಬಾನೇ ಸ್ಪೆಷಲ್ ಅಂತೆ. ಅದಕ್ಕೆ ಕಾರಣ ಈ ಬಾರಿಯ ಬಚ್ಚನ್ ಮನೆಯಲ್ಲಿ ಕೆಲ ಬರ್ತಡೇ ಗಳ ಜೊತೆಗೆ ದೀಪಾವಳಿ ಕೂಡ ಜೊತೆಯಾಗಿ ಬಂದಿರೋದು. ಹಾಗಾಗಿ ಈ ತಿಂಗಳು ಪೂರ್ತಿ ನಮಗೆ ದೀಪಾವಳಿಯೇ ಅಂತಾ ಐಶ್ವರ್ಯಾ ರೈ ತಿಳಿಸಿದ್ದಾರೆ.
 
ಇನ್ನು ಈ ಬಾರಿಯ ಬರ್ತಡೇ ವೇಳೆ ಐಶ್ ಶೂಟಿಂಗ್ ಗಾಗಿ ಲಂಡನ್ ನಲ್ಲಿದ್ದರು. ಅಲ್ಲಿಯೇ ಪತಿ ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ , ಐಶ್ ತಾಯಿ ಹಾಗೂ ಸಿನಿಮಾ ತಂಡದೊಂದಿಗೆ ಬರ್ತಡೇ ಆಚರಿಸಿಕೊಂಡ್ರು. ಇದೊಂದು ಮರೆಯಲಾಗದ ಹುಟ್ಟುಹಬ್ಬ ಅಂತಾ ಅವರು ಹೇಳಿದ್ದಾರೆ.ಮುಂದಿನ ವಾರ ಐಶ್ ಮುಂಬೈಗೆ ವಾಪಸ್ಸಾಗುತ್ತಿದ್ದಾರೆ. ಹಾಗಾಗಿ ಈ ಬಾರಿ ಮನೆಯಲ್ಲಿಯೇ ದೀಪಾವಳಿ ಆಚರಿಸಲಿದ್ದಾರೆ ಐಶ್. ಹಾಗಾಗಿ ಹಬ್ಬಕ್ಕಾಗಿ ಕಾಯುತ್ತಿದ್ದಾರೆ ಐಶ್ ಬೇಬಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್