Select Your Language

Notifications

webdunia
webdunia
webdunia
webdunia

ಕನ್ನಡ ಕಿರುತೆರೆ ನಟಿ ರಚನಾ ದುರ್ಮರಣ

ಕನ್ನಡ ಕಿರುತೆರೆ ನಟಿ ರಚನಾ ದುರ್ಮರಣ
ಬೆಂಗಳೂರು , ಗುರುವಾರ, 24 ಆಗಸ್ಟ್ 2017 (07:21 IST)
ಬೆಂಗಳೂರು: ಮಹಾನದಿ, ಮಧುಬಾಲಾ ಸೇರಿದಂತೆ ಜನಪ್ರಿಯ ಧಾರವಾಹಿಗಳ ನಾಯಕಿ ನಟಿಯಾಗಿ ಅಭಿನಯಿಸಿದ್ದ ಕನ್ನಡ ಕಿರುತೆರೆ ನಟಿ ರಚನಾ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

 
ನಿನ್ನೆ ತಡರಾತ್ರಿ ನೆಲಮಂಗಲ ತಾಲೂಕು ಸೋಲೂರು ಬಳಿ ಈ ಅಪಘಾತ ನಡೆದಿದೆ. ರಚನಾ ಜತೆ ಸಹ ನಟ ಜೀವನ್ ಕೂಡಾ ಮೃತಪಟ್ಟಿದ್ದಾರೆ. ಸ್ನೇಹಿತರು, ಸಹ ನಟರ ಜತೆ ರಚನಾ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ತೆರಳುತ್ತಿದ್ದರು. ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆ ಈ ಪ್ರವಾಸ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ನಿಂತಿದ್ದ ಟ್ಯಾಂಕರ್ ಗೆ ನಟಿ ಪ್ರಯಾಣಿಸುತ್ತಿದ್ದ ಸಫಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಚನಾ ಹಾಗೂ ನಟ ಜೀವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಖ್ಯಾತ ನಟಿ ಪ್ರಿಯಾಮಣಿ