Select Your Language

Notifications

webdunia
webdunia
webdunia
webdunia

(Viral Video) ಎಣ್ಣೆ ಹೊಡೆದಿದ್ದ ಪೈಲಟ್: ಗಿರಕಿ ಹೊಡೆದು ಕೆರೆಗೆ ಬಿದ್ದ ವಿಮಾನ

ವಿಮಾನ ಅಪಘಾತ
ಸೈಬೀರಿಯಾ , ಬುಧವಾರ, 19 ಜುಲೈ 2017 (08:01 IST)
4 ಸೀಟಿನ ವಿಮಾನವೊಂದು ಗಿರಕಿ ಹೊಡೆಯುತ್ತಾ ಕೆರೆಗೆ ಬಿದ್ದಿರುವ ಘಟನೆ ಸೈಬೀರಿಯಾದಲ್ಲಿ ನಡೆದಿದೆ. ಪ್ರವಾಸಿಗರೊಬ್ಬರು ಈ ದೃಶ್ಯ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

ಅಮೆರಿಕದ ನಿರ್ಮಿತ 4 ಜನರನ್ನ ಹೊತ್ತೊಯ್ಯುತ್ತಿದ್ದ ಸೆನ್ಸಾ 172-ಆರ್ ವಿಮಾನವು ಗಿರಕಿ ಹೊಡೆದು ಸೈಬೀರಿಯಾದ ಪ್ರಸಿದ್ಧ ಬೈಕಲ್ ಕೆರೆಗೆ ಬಿದ್ದಿದೆ. ವಿಮಾನದ ಪತನಕ್ಕೆ ಇಂಜಿನ್ ವೈಫಲ್ಯ ಕಾರಣ ಎನ್ನಲಾಗುತ್ತಿದೆಯಾದರೂ ಪೈಲಟ್ ಸೇರಿ ಪ್ರಯಾಣಿಕರು ಕಂಠಪೂರ್ತಿ ಕುಡಿದಿರುವುದು ಬೆಳಕಿಗೆ ಬಂದಿದೆ.




ಕೆರೆ ಬಳಿ ನಿಂತಿದ್ದ ಪ್ರವಾಸಿಗರು ವಿಮಾನ ಪತನವಾದ ಕೂಡಲೇ ಪೈಲಟ್ ಮತ್ತು ಪ್ರಯಾಣಿಕರ ರಕ್ಷಣೆಗೆ ಧಾವಿಸಿದ್ದಾರೆ. ಸದ್ಯ, ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ರಷ್ಯಾ ವಿಮಾನಯಾನ ಸಂಸ್ಥೆ ತನಿಖೆಗೆ ಆದೇಶಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾರಾಗೃಹದಲ್ಲಿ ಚೂಡಿದಾರ್ ಧರಿಸಿ ಓಡಾಡುತ್ತಿರುವ ಶಶಿಕಲಾ..!