ಬೆಂಗಳೂರು: ಕಿರುತೆರೆಯ ಫೇವರಿಟ್ ಜೋಡಿ ಚಂದನ್ ಕುಮಾರ್-ಕವಿತಾ ಗೌಡ ಸದ್ಯದಲ್ಲಿಯೇ ಮದುವೆಯಾಗುತ್ತಾರೆ, ಇವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬಿತ್ಯಾದಿ ರೂಮರ್ ಗಳಿಗೆ ಚಂದನ್ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ.
ಕವಿತಾ-ಚಂದನ್ ಇತ್ತೀಚೆಗೆ ಗೆಳೆಯರೊಂದಿಗೆ ಟ್ರಕ್ಕಿಂಗ್ ಮಾಡಿದ್ದು, ಫೋಟೋ ಶೂಟ್ ಮಾಡಿದ್ದನ್ನೆಲ್ಲಾ ನೋಡಿದ ಕೆಲವರು ಇವರು ಲವ್ ಮಾಡುತ್ತಿದ್ದಾರೆ ಎಂದೇ ಅಂದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಅವರು ಮದುವೆಯಾಗಿದ್ದಾರೆ ಎಂದೇ ಸುದ್ದಿಹಬ್ಬಿದೆ.
ಹೀಗಾಗಿ ಚಂದನ್ ಕವಿತಾ ಜತೆಗಿನ ಡ್ಯಾನ್ಸ್ ವಿಡಿಯೋ ಒಂದನ್ನು ಪ್ರಕಟಿಸಿ ‘ನಾವು ಫ್ರೆಂಡ್ಸ್ ಅಂತ ಗೊತ್ತಿದ್ದರೂ ಮದುವೆ ಸುದ್ದಿ ಹಬ್ಬಿಸಿ ಕನ್ ಫ್ಯೂಸ್ ಮಾಡೋವರನ್ನು ಮತ್ತಷ್ಟು ಕನ್ ಫ್ಯೂಸ್ ಮಾಡಲಿ ಎಂದು ಈ ವಿಡಿಯೋ ಹಾಕುತ್ತಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ತಮ್ಮ ಬಗ್ಗೆ ಬಂದ ಒಂದೆರಡು ಸುದ್ದಿಗಳನ್ನು ಪ್ರಕಟಿಸಿ ಇದೆಲ್ಲಾ ಫೇಕ್ ನ್ಯೂಸ್ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.