Publish Date: Thu, 10 Sep 2020 (09:42 IST)
Updated Date: Thu, 10 Sep 2020 (09:43 IST)
ಬೆಂಗಳೂರು: ಮಾದಕ ದ್ರವ್ಯ ಪ್ರಕರಣಗಳು ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿತ್ರರಂಗದ ಸಮಸ್ಯೆ ಬಗ್ಗೆ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಲು ಸಿಎಂ ನಿವಾಸಕ್ಕೆ ಆಗಮಿಸಿದ್ದ ವೇಳೆ ಮಾಧ‍್ಯಮಗಳೊಂದಿಗೆ ಮಾತನಾಡಿರುವ ಯಶ್ ಡ್ರಗ್ಗಿಸ್ಟ್ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಮ್ಮ ದೇಹವೇ ನಮ್ಮದಲ್ಲ, ಅದು ನಮ್ಮ ಅಪ್ಪ-ಅಮ್ಮ ಕೊಟ್ಟ ಭಿಕ್ಷೆ. ಅದನ್ನು ಹಾಳು ಮಾಡಿಕೊಳ್ಳಬೇಡಿ. ಡ್ರಗ್ ಕೇವಲ ಚಿತ್ರರಂಗದಲ್ಲಿ ಮಾತ್ರವಿಲ್ಲ. ಶಾಲಾ, ಕಾಲೇಜುಗಳಲ್ಲೂ ಇವೆ. ಯುವಜನಾಂಗವನ್ನು ಈ ಕೆಟ್ಟದಾರಿಯಿಂದ ಹೊರತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಯಶ್ ಹೇಳಿದ್ದಾರೆ.