Publish Date: Thu, 10 Sep 2020 (09:05 IST)
Updated Date: Thu, 10 Sep 2020 (09:06 IST)
ಬೆಂಗಳೂರು: ಚಿತ್ರರಂಗದ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲು ಸಿಎಂ ಭೇಟಿಗೆ ಬಂದ ಸ್ಯಾಂಡಲ್ ವುಡ್ ನಟರಾದ ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ನೋಡಿ ಪೊಲೀಸರು ಕೆಲವು ಕ್ಷಣ ಪಕ್ಕಾ ಅಭಿಮಾನಿಗಳಾದ ಘಟನೆ ನಡೆದಿದೆ.
ಸಿಎಂ ನಿವಾಸದ ಸುತ್ತ ಭದ್ರತೆಗೆ ನೇಮಿಸಲಾಗಿದ್ದ ಪೊಲೀಸರು ಶಿವಣ್ಣ, ಯಶ್ ಮುಂತಾದ ಘಟಾನುಘಟಿಗಳನ್ನು ಕಂಡ ಕ್ಷಣ ಸೆಲ್ಫೀಗಾಗಿ ಮುಗಿಬಿದ್ದರು. ತಮ್ಮ ತಮ್ಮ ಮೊಬೈಲ್ ನಲ್ಲಿ ಮೆಚ್ಚುನ ನಟರ ಜತೆ ಸೆಲ್ಫೀ ತೆಗೆಸಿಕೊಂಡು ಖುಷಿಪಟ್ಟರು. ಶಿವಣ್ಣ ಕೂಡಾ ಅಷ್ಟೇ ಖುಷಿಯಿಂದಲೇ ಪೊಲೀಸರಿಗೆ ಸೆಲ್ಫೀ ನೀಡಿ ಮುಂದೆ ಸಾಗಿದರು.