ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ವಿಚಾರಣೆ ಮಾಡಲು ಹೊರಟರೆ ಸಿಸಿಬಿ ಪೊಲೀಸರ ಮುಂದೆ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.
ಮೊದಲ ದಿನವೇ ನನಗೆ ಬೆನ್ನು ನೋವು ಎಂದಿದ್ದ ರಾಗಣಿ, ಇದೀಗ ದಿನಕ್ಕೊಂದು ಆರೋಗ್ಯ ಸಮಸ್ಯೆ ಹೇಳಿ ವಿಚಾರಣೆ ತಪ್ಪಿಸಿಕೊಳ‍್ಳಲು ನೋಡುತ್ತಿದ್ದಾರೆ. ಇದೀಗ ಗ್ಯಾಸ್ಟ್ರಿಕ್ ಸಮಸ್ಯೆಯಾಗಿದೆ ಎಂದು ರಾಗಿಣಿ ತಮ್ಮನ್ನು ಭೇಟಿಯಾಗಲು ಬಂದಿದ್ದ ವಕೀಲರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ವೈದ್ಯರಿಂಧ ಚಿಕಿತ್ಸೆ ಕೊಡಿಸಲು ವಕೀಲರು ಪೊಲೀಸರಿಗೆ ಮನವಿ ಮಾಡಿದ್ದಾರೆ.