Webdunia - Bharat's app for daily news and videos

Install App

ಬಿಗ್ ಬಾಸ್ ನಲ್ಲಿ ಜೆಕೆಗೆ ಫೇವರ್ ಮಾಡ್ತಿದ್ದಾರಾ ಕಿಚ್ಚ ಸುದೀಪ್? ಅಭಿಮಾನಿಗೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ?

Webdunia
ಸೋಮವಾರ, 15 ಜನವರಿ 2018 (10:51 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ತಮ್ಮ ಹಳೆಯ ಗೆಳೆಯ ಜಯರಾಮ್ ಕಾರ್ತಿಕ್ ಗೆ ಫೇವರ್ ಮಾಡ್ತಿದ್ದಾರೆ ಎಂದು ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬ ಪರೋಕ್ಷವಾಗಿ ದೂರಿದ್ದಕ್ಕೆ ಕಿಚ್ಚ ತಕ್ಕ ಉತ್ತರ ಕೊಟ್ಟಿದ್ದಾರೆ.
 

ಆದಿತ್ಯ ಎಂಬ ಟ್ವಿಟರ್ ಖಾತೆಯ ವ್ಯಕ್ತಿ ಕಿಚ್ಚ ಸುದೀಪ್ ಗೆ ಟ್ವೀಟ್ ಮಾಡಿ ‘ಇದು ನನ್ನ ವಿನಂತಿ!! ಪಕ್ಷಪಾತೀ ಹೋಸ್ಟ್ ಆಗಬೇಡಿ. ನೀವು ಜೆಕೆ ಜತೆಗೆ ಹೇಗೆ ಇದ್ದೀರಿ ಎನ್ನುವುದನ್ನು ಇಡೀ ಕರ್ನಾಟಕ ಜನತೆ ನೋಡುತ್ತಿದೆ’ ಎಂದು ಚುಚ್ಚಿದ್ದಾರೆ.

ಇದಕ್ಕೆ ಅಷ್ಟೇ ತಾಳ್ಮೆಯಿಂದ ಉತ್ತರಿಸಿರುವ ಸುದೀಪ್ ‘ಖಂಡಿತಾ ಸರ್. ಇಡೀ ಕರ್ನಾಟಕ ಜನತೆ ನಿಮ್ಮನ್ನು ಸಂಪರ್ಕಿಸಿ ನನಗೆ ಈ ಸಂದೇಶ ಮುಟ್ಟಿಸುವಂತೆ ಹೇಳಿಕೊಂಡಿದ್ದಾರೆ ಎನ್ನುವುದು ನನಗೆ ಖುಷಿಯ ಸಂಗತಿ’ ಎಂದು ಬಟ್ಟೆಯೊಳಗೆ ಸುತ್ತಿಗೆ ಇಟ್ಟು ತಿರುಗೇಟು ನೀಡಿದ್ದಾರೆ.

ಕಿಚ್ಚನ ವಿರುದ್ಧ ಈ ರೀತಿ ಟೀಕಿಸಿ ಟ್ವೀಟ್ ಮಾಡಿದ ಅಭಿಮಾನಿ ವಿರುದ್ಧ ಅಭಿಮಾನಿಗಳೂ ತಿರುಗಿಬಿದ್ದಿದ್ದಾರೆ. ಸುದೀಪ್ ಎಂತಹಾ ನಿರೂಪಕ ಎನ್ನುವುದು ಎಲ್ಲರಿಗೂ ಗೊತ್ತು. ಅವರು ಎಂತಹಾ ಮಹಾನ್ ವ್ಯಕ್ತಿ ಎನ್ನುವುದು ನಮಗೆ ಗೊತ್ತು. ಹಿಂದಿನ ಸೀಸನ್ ನಲ್ಲಿ ತಮಗೆ ಬೇಕಾದವರು, ಸ್ನೇಹಿತರು ಇದ್ದರೂ ಅವರನ್ನು ಗೆಲ್ಲಿಸದೇ ನಿಜವಾದ ಅಭ್ಯರ್ಥಿಗಳನ್ನೇ ಗೆಲ್ಲಿಸಿದರು. ಬಾಯಿಗೆ ಬಂದ ಹಾಗೆ ಹೇಳಬೇಡಿ ಎಂದು ಅಭಿಮಾನಿಗಳು ಜಾಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments