Publish Date: Mon, 15 Jan 2018 (10:27 IST)
Updated Date: Mon, 15 Jan 2018 (10:31 IST)
ಬೆಂಗಳೂರು: ಮಜಾ ಟಾಕೀಸ್ ಎಂಬ ಕಲರ್ಸ್ ವಾಹಿನಿಯ ಶೋ ಭಾರೀ ಹಿಟ್ ಆಗಿತ್ತು. ಕನ್ನಡ ಕಿರುತೆರೆಯಲ್ಲಿ ಹಲವು ಕಾಮಿಡಿ ಶೋಗಳಿಗೆ ಇದೇ ನಾಂದಿ ಹಾಡಿತ್ತು. ಇದೀಗ ಮತ್ತೆ ಮಜಾ ಟಾಕೀಸ್ ಬರಲಿದೆ.
ಒಂದನೇ ಭಾಗ ಮುಕ್ತಾಯವಾದಾಗ ಅದೆಷ್ಟೋ ವೀಕ್ಷಕರು ಬೇಸರಪಟ್ಟುಕೊಂಡಿದ್ದರು. ಸಂಪೂರ್ಣ ಮನರಂಜನೆ ಜತೆಗೆ ಸಿನಿ, ಸಾಹಿತ್ಯ ಲೋಕದ ದಿಗ್ಗಜರು ಬಂದು ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡುತ್ತಿತ್ತು. ಇದೀಗ ಸೃಜನ್ ಲೋಕೇಶ್ ಮತ್ತೆ ಮಜಾ ಟಾಕೀಸ್ ಶುರು ಮಾಡಲು ಹೊರಟಿದ್ದಾರೆ.
ಆದರೆ ಈ ಬಾರಿ ಕೆಲವು ಸಣ್ಣ ಬದಲಾವಣೆಗಳೊಂದಿಗೆ, ಕೆಲವು ಬದಲಾದ ಪಾತ್ರವರ್ಗದವರೊಂದಿಗೆ ಹೆಚ್ಚು ಮನರಂಜನೆಯೊಂದಿಗೆ ನಿಮ್ಮ ಮುಂದಿರುತ್ತೇವೆ ಎಂದು ಸೃಜನ್ ಲೋಕೇಶ್ ಭರವಸೆ ಕೊಟ್ಟಿದ್ದಾರೆ. ಯಾವಾಗಿನಿಂದ ಎಂದು ಸದ್ಯದಲ್ಲೇ ನಿರೀಕ್ಷಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ