Publish Date: Sat, 13 Jan 2018 (09:55 IST)
Updated Date: Sat, 13 Jan 2018 (09:58 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಸಮೀರ್ ಆಚಾರ್ಯ ಮತ್ತೊಮ್ಮೆ ಜನತೆಯ ಸಮ್ಮುಖದಲ್ಲಿ ಮದುವೆ ಮಾಡಿಕೊಂಡರು.
ಮನೆಯೊಳಗೆ ಬಂದ ಪತ್ನಿ ಶ್ರಾವಣಿ ಮದುವೆ ಸೀರೆಯಲ್ಲೇ ಬಂದಿದ್ದರು. ಸಮೀರ್ ಆಚಾರ್ಯಗೂ ಅವರು ಮದುವೆಯಲ್ಲಿ ತೊಟ್ಟಿದ್ದ ವೇಷಭೂಷಣ ತಂದಿದ್ದರು. ನಮ್ಮ ಮದುವೆಗೆ ಎಲ್ಲರಿಗೂ ಕರೆಯಕ್ಕಾಗಿರಲಿಲ್ಲ ಎಂದು ಎಲ್ಲರ ಸಮ್ಮುಖದಲ್ಲೇ ಹಾರ ಬದಲಾಯಿಸಿಕೊಂಡು ಮದುವೆ ಶಾಸ್ತ್ರ ಮುಗಿಸಿದರು.
ಇದಕ್ಕೆ ಮನೆಯವರೂ ಸಾಕ್ಷಿಯಾದರು. ನಂತರ ಪತಿ ಸಮೀರ್ ಆಚಾರ್ಯ ಜತೆ ನೃತ್ಯ ಮಾಡಿದರು. ಅಂತೂ ಮನೆ ತುಂಬಾ ಚಿನಕುರುಳಿಯಂತೆ ಓಡಾಡಿದ ಶ್ರಾವಣಿಯನ್ನು ನೋಡಿ ಮನೆಯ ಇತರ ಸ್ಪರ್ಧಿಗಳಿಗೂ ಖುಷಿಯಾಯಿತು. ಮಡಕೆ ಬ್ಯಾಲೆನ್ಸ್ ಮಾಡುವ ಟಾಸ್ಕ್ ಮಾಡಿದ ಜೆಕೆ ಇವರಿಬ್ಬರ ಜೋಡಿ ಕಣ್ಣಲ್ಲಿ ನೀರು ತುಂಬಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ