Publish Date: Sat, 13 Jan 2018 (22:30 IST)
Updated Date: Sat, 13 Jan 2018 (22:39 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿ ಯಾರು ಎನ್ನುವ ಬಗ್ಗೆ ಕಿಚ್ಚ ಸುದೀಪ್ ಪ್ರಕಟಿಸುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ರಿಯಾಜ್ ಹೆಸರು ಕೇಳಿಬಂದಿತ್ತು. ಅದೀಗ ನಿಜವಾಗಿದೆ.
ರಿಯಾಜ್ ಭಾಷಾ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕೆಲವು ವಾರಗಳ ಮೊದಲು ರಿಯಾಜ್ ಫೈನಲ್ ತಲುಪುವ ಸ್ಪರ್ಧಿ ಎಂದೇ ಹೇಳಲಾಗುತ್ತಿತ್ತು. ಆದರೆ ಈ ಎರಡು ವಾರಗಳಲ್ಲಿ ಅವರ ಜನಪ್ರಿಯತೆ ಕಡಿಮೆಯಾಗಿತ್ತು ಎನ್ನಬಹುದು.
ಅಂತಿಮವಾಗಿ ರಿಯಾಜ್ ಮತ್ತು ಸಮೀರಾಚಾರ್ಯ ನಡುವೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಸ್ವತಃ ಸಮೀರಾಚಾರ್ಯ ರಿಯಾಜ್ ಉಳಿಯಲಿ ಎಂದರು. ರಿಯಾಜ್ ಕೂಡಾ ಸಮೀರ್ ಹೋಗಲಿ, ನಾನು ಉಳಿಯಬೇಕು ಎಂದರು. ಅದೇನೇ ಇದ್ದರೂ ಕೊನೆಗೆ ವೀಕ್ಷಕರ ಮತಗಳ ಆಧಾರದಲ್ಲಿ ರಿಯಾಜ್ ಮನೆಯಿಂದ ಹೊರನಡೆಯಬೇಕಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ