ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಚಕ್ರವರ್ತಿ ಚಂದ್ರಚೂಡ್ ಹಿಂದೊಮ್ಮೆ ನಟಿ ಶ್ರುತಿ ಅವರನ್ನು ವಿವಾಹವಾಗಿ ಬಳಿಕ ಬೇರೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.
ಇಬ್ಬರ ವಿವಾಹ ಭಾರೀ ವಿವಾದವಾಗಿತ್ತು. ಬಳಿಕ ಚಂದ್ರಚೂಡ್ ಮೊದಲನೇ ಪತ್ನಿಯ ಆಕ್ಷೇಪದ ಬಳಿಕ ಶ್ರುತಿ ತಾವಾಗಿಯೇ ಚಂದ್ರಚೂಡ್ ರಿಂದ ಬೇರೆಯಾಗಿದ್ದರು. ಈ ವಿಚಾರ ಈಗ ಬಿಗ್ ಬಾಸ್ ಮನೆಯಲ್ಲಿ ಪ್ರತಿಧ್ವನಿಸಿದೆ.
ಸುದೀಪ್ ಎದುರು ಮಾತುಕತೆ ನಡೆಯುವಾಗ ಚಂದ್ರಚೂಡ್ ಇನ್ನೊಬ್ಬ ಸ್ಪರ್ಧಿ ಮಂಜು-ದಿವ್ಯಾ ಸುರೇಶ್ ನಡುವಿನ ಸ್ನೇಹದ ಬಗ್ಗೆ ಆಕ್ಷೇಪದಿಂದ ಮಾತನಾಡಿದ್ದಾರೆ. ಇದು ಮಂಜು ಅವರನ್ನು ಕೆರಳಿಸಿದೆ. ಹೆಣ್ಣಿನ ಬಗ್ಗೆ ಮಾತನಾಡುವ ಇವರು ಎಲ್ಲಿಂದ ಹೇಗೆ ಬಂದರು ಎಂದೆಲ್ಲಾ ನನಗೂ ಗೊತ್ತಿದೆ ಎಂದರು. ಇದರ ಅರ್ಥವೇನು ಎಂದು ಸುದೀಪ್ ಪ್ರಶ್ನಿಸಿದಾಗ ಅವರ ಮದುವೆ ಬಗ್ಗೆ ಹೇಳುತ್ತಿದ್ದೇನೆ ಎಂದು ಮಂಜು ಹೇಳಿದ್ದಾರೆ.
ಇದು ಚಂದ್ರಚೂಡ್ ರನ್ನು ಕೆರಳಿಸಿದೆ. ನನ್ನ ಜೀವನವನ್ನು ಈ ಮನುಷ್ಯ ಏನು ನೋಡಿದ್ದಾನೆ. ನನಗೆ ಎರಡು ಡಿವೋರ್ಸ್ ಆಗಿದೆ. ಸ್ಟಾರ್ ನಟಿಗೆ ವಿಚ್ಛೇದನ ನೀಡಿದ್ದೇನೆ. ಅದೂ ಕಾನೂನು ಪ್ರಕಾರವೇ ವಿಚ್ಛೇದನ ನೀಡಿದ್ದೇನೆ. ನಾಟಕ ಮಾಡಿಲ್ಲ. ಇದಕ್ಕೆ ನಾನು ಬೇರೆ ಕಡೆ ಉತ್ತರ ನೀಡುತ್ತೇನೆ. ನನ್ನ ಹೆಂಡತಿಯರ ಬಗ್ಗೆ ಮಾತನಾಡುತ್ತಾನೆ ಎಂದು ಹರಿಹಾಯ್ದಿದ್ದಾರೆ.