Publish Date: Wed, 23 Jun 2021 (10:24 IST)
Updated Date: Wed, 23 Jun 2021 (10:25 IST)
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಮತ್ತೆ ಬಿಗ್ ಬಾಸ್ ಕನ್ನಡ 8 ಇಂದಿನಿಂದ ಆರಂಭವಾಗುತ್ತಿದೆ. ಇದರ ಬಗ್ಗೆ ಬಹುಭಾಷಾ ನಟಿ ಜೆನಿಲಿಯಾ ದೇಶ್ ಮುಖ್ ಪ್ರತಿಕ್ರಿಯಿಸಿದ್ದಾರೆ.
ಬಿಗ್ ಬಾಸ್ ಮತ್ತೆ ಆರಂಭವಾಗುತ್ತಿರುವುದರ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದರು. ಈಗ ಸ್ಪರ್ಧಿಗಳಿಗೆ ತಮಗೆ ಎಷ್ಟು ಜನಪ್ರಿಯತೆ ಇದೆ, ಮನೆಯ ಸಹ ಸದಸ್ಯರು ತಮ್ಮ ಮೇಲೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದೆಲ್ಲಾ ಚೆನ್ನಾಗಿ ಗೊತ್ತಿದೆ. ಈಗ ನಿಜವಾಗಿಯೂ ಸ್ಪರ್ಧೆ ಆಸಕ್ತಿದಾಯಕವಾಗಲಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜೆನಿಲಿಯಾ, ಇದು ನಿಜವಾಗಿಯೂ ಅದ್ಭುತ ಸುದ್ದಿ ಎಂದಿದ್ದಾರೆ. ಇನ್ನು ಜೆನಿಲಿಯಾ ಪ್ರತಿಕ್ರಿಯಿಸಿದ್ದಕ್ಕೆ ಸುದೀಪ್ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ.