Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ನಾನೇ ದೀಪಿಕಾ ಗಂಡ ಎಂದ ಶೈನ್ ಶೆಟ್ಟಿ!

ಬಿಗ್ ಬಾಸ್ ಕನ್ನಡ: ನಾನೇ ದೀಪಿಕಾ ಗಂಡ ಎಂದ ಶೈನ್ ಶೆಟ್ಟಿ!
ಬೆಂಗಳೂರು , ಗುರುವಾರ, 5 ಡಿಸೆಂಬರ್ 2019 (10:49 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಜೋಡಿ ಜೀವಗಳಿಗೆ ಏನೂ ಕಡಿಮೆಯಿಲ್ಲ. ಕಳೆದೊಂದು ವಾರದಿಂದ ಶೈನ್ ಶೆಟ್ಟಿ ಬೇಕೆಂದೇ ದೀಪಿಕಾ ದಾಸ್ ರನ್ನು ರೇಗಿಸುತ್ತಿದ್ದಾರೆ.


ನಿನ್ನೆಯ ದಿನವಂತೂ ಶೈನ್ ದೀಪಿಕಾರ ಕಾಲೆಳೆಯುತ್ತಾ ವಾಸುಕಿ ಬಳಿ ಮುಂದೊಂದು ದಿನ ಇಬ್ಬರು ಮಕ್ಕಳಾದ ಮೇಲೆ ದೀಪಿಕಾ ನಿಮ್ಮ ಮುಂದೆ ಬರುತ್ತಾರೆ. ಆಗ ನಿಮಗೆ ಶಾಕ್ ಆಗುತ್ತದೆ. ಆಗ ನಾನು ಹತ್ತಿರ ಬರುತ್ತೇನೆ. ಯಾಕೆ ಹೇಳಿ? ನಾನೇ ದೀಪಿಕಾ ಗಂಡ ಅಂತ ರೇಗಿಸುತ್ತಾರೆ.

ಇದಕ್ಕೆ ದೀಪಿಕಾ ಒಂದು ಉರಿನೋಟ ಕೊಟ್ಟು, ಎಂತಾ ಜೋಕ್ ಹೇಳಿದಿರಿ ಶೈನ್ ಎಂದು ಟಾಂಗ್ ಕೊಡುತ್ತಾರೆ. ಆದರೆ ಶೈನ್ ಈ ರೀತಿ ಬೇಕೆಂದೇ ದೀಪಿಕಾ ಹಿಂದೆ ಸುತ್ತುತ್ತಿರುವುದು ಪ್ರೇಕ್ಷಕರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಇದರಿಂದ ನಿಮ್ಮ ಇಮೇಜ್ ಹಾಳಾಗುತ್ತದೆ. ಹಾಳು ಮಾಡಿಕೊಳ್ಳಬೇಡಿ ಎಂದು ಶೈನ್ ಗೆ ಸಾಮಾಜಿಕ ಜಾಲತಾಣದ ಮೂಲಕ ಸಲಹೆ ಕೊಡತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಜತೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಫೋಟೋ ನೋಡಿ ಜನ ಏನಂದ್ರು ಗೊತ್ತಾ?