Select Your Language

Notifications

webdunia
webdunia
webdunia
webdunia

ಬಿಗ್ ಬಾಸ್: ಕಿರಿಕ್ ಮಾಡಿದ್ದಕ್ಕೆ ಚೈತ್ರಾ ಕೋಟೂರು ವಿರುದ್ಧ ವೀಕ್ಷಕರ ಆಕ್ರೋಶ

ಬಿಗ್ ಬಾಸ್: ಕಿರಿಕ್ ಮಾಡಿದ್ದಕ್ಕೆ ಚೈತ್ರಾ ಕೋಟೂರು ವಿರುದ್ಧ ವೀಕ್ಷಕರ ಆಕ್ರೋಶ
ಬೆಂಗಳೂರು , ಮಂಗಳವಾರ, 3 ಡಿಸೆಂಬರ್ 2019 (10:21 IST)
ಬೆಂಗಳೂರು: ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಪಡೆದ ಚೈತ್ರಾ ಕೋಟೂರು ವಿರುದ್ಧ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೇಕೆಂದೇ ವಾಸುಕಿ ವೈಭವ್ ಜತೆ ಹಿಂದೆ ಯಾವತ್ತೋ ನಡೆದ ಟಾಸ್ಕ್ ವಿಚಾರವನ್ನು ಈಗ ಕೆದಕಿ ಟಾಂಗ್ ನೀಡುತ್ತಿದ್ದುದಕ್ಕೆ ಇಬ್ಬರ ನಡುವೆ ಡೈನಿಂಗ್ ಏರಿಯಾದಲ್ಲಿ ವಾಗ್ವಾದವೇ ನಡೆಯಿತು. ಅದಲ್ಲದೆ ಬೇಕೆಂದೇ ಮನೆಯವರೆಲ್ಲಾ ನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದೆಲ್ಲ ಆರೋಪ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ.

ವಿನಾಕಾರಣ ಕಿರಿಕ್ ಮಾಡುತ್ತಿರುವ ಚೈತ್ರಾರನ್ನು ಮೊದಲು ಮನೆಯಿಂದ ಹೊರ ಹಾಕಿ. ಪೃಥ್ವಿ ಪ್ರಾಮಾಣಿಕರಾಗಿದ್ದರು. ಅವರನ್ನು ವಾಪಸ್ ಕರೆಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕಾಮೆಂಟ್ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ವಾರ ಮನೆಯ ಕ್ಯಾಪ್ಟನ್ ರಾಜು ತಾಳಿಕೋಟೆ ಹೊರತುಪಡಿಸಿ ಉಳಿದವರೆಲ್ಲಾ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಯಾರು ಉಳಿಯುತ್ತಾರೆ, ಯಾರು ಹೊರಹೋಗುತ್ತಾರೆ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಆತ್ಮಕತೆ ಸಿನಿಮಾ: ಮಿಥಾಲಿ ಪಾತ್ರ ಮಾಡುತ್ತಿರುವ ನಟಿ ಯಾರು ಗೊತ್ತಾ?