Publish Date: Mon, 03 Feb 2020 (11:25 IST)
Updated Date: Mon, 03 Feb 2020 (11:27 IST)
ಬೆಂಗಳೂರು: ಬಿಗ್ ಬಾಸ್ ಏಳನೇ ಆವೃತ್ತಿ ನಿನ್ನೆ ಕೊನೆಯಾಗಿದ್ದು ಶೈನ್ ಶೆಟ್ಟಿ ವಿಜೇತರಾಗಿ 61 ಲಕ್ಷ ರೂ. ಬಹುಮಾನವಾಗಿ ಪಡೆದಿದ್ದಾರೆ.
ಆದರೆ ಫೈನಲಿಸ್ಟ್ ಗಳಾಗಿ ಅಂತಿಮ ಹಂತದಲ್ಲಿ ಟ್ರೋಫಿ ಗೆಲ್ಲಲು ವಿಫಲರಾದ ದೀಪಿಕಾ ದಾಸ್, ಕುರಿ ಪ್ರತಾಪ್, ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿಗೆ ಬಿಗ್ ಬಾಸ್ ಏನೂ ಲಾಸ್ ಮಾಡಿಲ್ಲ.
ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಆರು ಲಕ್ಷ ರೂ.ಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ. ಇನ್ನು ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿದ್ದಾಗ ಮಾಡಿದ್ದ ಟಾಸ್ಕ್ ವಿಜೇತರಾಗಿ ಐದು ಲಕ್ಷ ರೂ. ಬಹುಮಾನದ ಚೆಕ್ ಪಡೆದಿದ್ದಾರೆ. ಫೈನಲಿಸ್ಟ್ ಗಳ ಪೈಕಿ ಮೊದಲನೆಯವರಾಗಿ ಹೊರಬಿದ್ದ ಭೂಮಿ ಶೆಟ್ಟಿ ಮತ್ತು ವಾಸುಕಿ ವೈಭವ್ ಕೂಡಾ ತಲಾ ಒಂದು ಲಕ್ಷ ರೂ. ಬಹುಮಾನ ಪಡೆದಿದ್ದಾರೆ. ಇದರ ಜತೆಗೆ ಈ ಸ್ಪರ್ಧಿಗಳಿಗೆ ಈ ಮೊದಲು ಒಪ್ಪಂದವಾದಂತೆ ಸಂಭಾವನೆಯೂ ಸಿಗಲಿದೆ. ಹೀಗಾಗಿ ಇವರಿಗೆ ಬಿಗ್ ಬಾಸ್ ನಿಂದ ಜೇಬಿಗೆ ಯಾವುದೇ ನಷ್ಟವಾಗಿಲ್ಲ ಎನ್ನಬಹುದು.