Select Your Language

Notifications

webdunia
webdunia
webdunia
webdunia

BBK10: ವಾರದ ಮಧ್ಯೆಯೇ ಎಲಿಮಿನೇಟ್ ಆದ ತನಿಷಾ

Tanisha Kuppanda
ಬೆಂಗಳೂರು: ಬಿಗ್ ಬಾಸ್ ಸೀಸನ್ 10 ರಲ್ಲಿ ವಾರದ ಮಧ್ಯೆಯೇ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗಿದ್ದಾರೆ.

ಬಿಗ್ ಬಾಸ್ ಸೀಸನ್ 10 ಅಂತಿಮ ಹಂತಕ್ಕೆ ಬಂದಿದ್ದು, ಈ ವಾರ ಮಧ‍್ಯರಾತ್ರಿ ಅಚ್ಚರಿಯ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಎಲ್ಲರನ್ನೂ ಗಾರ್ಡನ್ ಏರಿಯಾಗೆ ಕರೆತಂದು ಸಾಲಾಗಿ ನಿಲ್ಲಲು ಸೂಚಿಸಲಾಯಿತು.

ಬಳಿಕ ಬಿಗ್ ಬಾಸ್ ಇದೀಗ ಬಿಗ್ ಬಾಸ್ ಸೂಚಿಸುವ ಸ್ಪರ್ಧಿ ಮನೆಯಿಂದ ಹೊರಹೋಗಬೇಕು ಎಂದು ಆದೇಶಿಸಿದರು. ಬಿಗ್ ಬಾಸ್ ಆದೇಶ ಕೇಳಿ ಮನೆಯವರೆಲ್ಲರೂ ಶಾಕ್ ಆದರು. ಈ ವೇಳೆ ತನಿಷಾ ಹೆಸರನ್ನು ಘೋಷಿಸಲಾಯಿತು.

ಬಿಗ್ ಬಾಸ್ ತಮ್ಮ ಹೆಸರು ಘೋಷಿಸುತ್ತಿದ್ದಂತೇ ತನಿಷಾ ಕಣ್ಣೀರು ಹಾಕಿದ್ದಾರೆ. ಇದು ಅವರಿಗೆ ಮಾತ್ರವಲ್ಲ, ಇಡೀ ಮನೆಯವರಿಗೇ ಶಾಕ್ ಆಗಿತ್ತು. ‘ಯಾಕೆ ಬಿಗ್ ಬಾಸ್? ನಾನು ಮನೆಯಿಂದ ಹೊರಹೋಗಬೇಕೆಂದು ನಿಮ್ಮೆಲ್ಲರ ಕೋರಿಕೆಯಾಗಿತ್ತಲ್ಲವೇ? ನೋಡಿ ಹೊರ ಹೋಗುತ್ತಿದ್ದೇನೆ’ ಎಂದು ಕಣ್ಣೀರು ಹಾಕುತ್ತಾ ಮನೆಯಿಂದ ಹೊರಹೋಗುತ್ತಾರೆ. ಈ ಸಂಚಿಕೆ ಇಂದು ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀತೆ, ಲಕ್ಷ್ಮಣನೊಡನೆ ಅಯೋಧ್ಯೆಗೆ ಬಂದ ರಾಮ!